Breaking News

ಪುತ್ತೂರಲ್ಲಿ ಗೋ ಕಳ್ಳರ ಅಟ್ಟಹಾಸ ,ಸರಣಿ ಗೋಕಳ್ಳತನ


ಕಳವಳಗೊಂಡ ಸಾರ್ವಜನಿಕರು 


ಪುತ್ತೂರು : ಕಳೆದ ಹಲವು ದಿನಗಳಿಂದ ಪುತ್ತೂರು ಮತ್ತು ಇಲ್ಲಿನ ಆಸುಪಾಸಿನಲ್ಲಿ ನಡೆಯುತ್ತಿರುವ ಸರಣಿ ಗೋಗಳವು ಪ್ರಕರಣಗಳು ಇಲ್ಲಿನ ಜನರನ್ನು ಕಂಗೆಡಿಸಿದೆ. ಫೆ 6, 7ರಂದು ರಾತ್ರಿ ಎರಡು ಕಡೆಗಳಲ್ಲಿ ಗೋಗಳವು ಪ್ರಕರಣಗಳು ನಡೆದಿದ್ದರೆ ಪರಿಸರದಲ್ಲಿ ಜಾನುವಾರು ಕಳವು ಪ್ರಕರಣಗಳು ಹೆಚ್ಚು ಹೆಚ್ಚು ವರದಿಯಾಗುತ್ತಲೇ ಇದ್ದು, ನಿವಾಸಿಗಳು ಕಂಗೆಟ್ಟಿದ್ದಾರೆ.

ಸೋಮವಾರ ರಾತ್ರಿ ಕೆಮ್ಮಾಯಿಯ ನಾಣಿಯಪ್ಪ ಪೂಜಾರಿ ಅವರ ಸುಮಾರು 35,000 ರೂ ಮೌಲ್ಯದ ಎರಡು ದನಗಳನ್ನು ಕಳವು ಮಾಡಲಾಗಿದ್ದರೆ, ಅದೇ ದಿನ ರಾತ್ರಿ ಬಪ್ಪಳಿಗೆ ಕಾರ್ಕುಂಜೆಯ ನಿವಾಸಿ ಅಶ್ರಫ್ ಎಂಬವರ ಹಟ್ಟಿಯಲ್ಲಿದ್ದ 80,000 ರೂ ಮೌಲ್ಯದ 5 ದನಗಳನ್ನು ಕಿಡಿಗೇಡಿಗಳು ಕಳವು ಗೈದಿದ್ದರು. ಇವೆರಡೂ ಒಂದೇ ತಂಡದ ಕೃತ್ಯವಾಗಿರುವ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಎರಡೂ ಪ್ರಕರಣಗಳು ಪುತ್ತೂರು ಠಾಣೆಯಲ್ಲಿ ದಾಖಲಾಗಿದೆ. ಇದಲ್ಲದೆ ಇನ್ನು ಕೆಲವು ಪ್ರತ್ಯೇಕ ಪ್ರಕರಣಗಳು ಕೂಡಾ ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿದೆ. ಹಲವು ಪ್ರಕರಣಗಳು ದಾಖಲಾಗಿದ್ದರೂ ಇನ್ನೂ ಕೂಡಾ ಒಬ್ಬನೇ ಒಬ್ಬ ಆರೋಪಿಯನ್ನು ಪೊಲೀಸರು ಹಿಡಿದಿಲ್ಲ. ಅಲ್ಲದೇ ದಿನದಿಂದ ದಿನಕ್ಕೆ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ.


loading...

No comments