ಕಾಸರಗೋಡಿನ ಜಿಹಾದಿ ಹಫೇಸುದ್ದೀನ್ ಹತ್ಯೆ?
ಕೊಚ್ಚಿ: ಉಗ್ರ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‍ಗೆ ಸೇರುವ ಸಲುವಾಗಿ ದೇಶ ತೊರೆದು ಹೋಗಿದ್ದ ಹಫೇಸುದ್ದೀನ್ ತೆಕ್ಕೇ ಕೋಲೆತ್ ಅಫ್ಘಾನಿಸ್ತಾನದ ಯುದ್ಧಪೀಡಿತ ನನ್‍ಗರ್ಹರ್ ಜಿಲ್ಲೆಯಲ್ಲಿ ಹತ್ಯೆಯಾಗಿದ್ದಾನೆ.
ಈಗ ಹತನಾಗಿರುವ ಉಗ್ರ ದುಬೈಯಲ್ಲಿ ಮಾಡುತ್ತಿದ್ದ ಕೆಲಸ ತೊರೆದು ತನ್ನ ಊರಾದ ಕೇರಳದ ಪಡನೆ ಗ್ರಾಮಕ್ಕೆ ವಾಪಾಸಾಗಿದ್ದ. ಪಡಾನೆ ಬಂದ ನಂತರ ಆತ 'ಪೀಸ್' ಇಂಟರ್ ನ್ಯಾಶನಲ್ ಶಾಲೆಯಲ್ಲಿ ಕೆಲಸ ಮಾಡಲು ಶುರು ಮಾಡಿದ್ದಾನೆ. ಅಲ್ಲಿ ಅಬ್ದುಲ್ಲಾ ರಶೀದ್ ಅಬ್ದುಲ್ಲಾ ಎಂಬಾತ ಈತನನ್ನು ಐಸಿಸ್ ಉಗ್ರ ಸಿದ್ದಾಂತದೆಡೆಗೆ ಪ್ರಭಾವಿತನಾಗುವಂತೆ ಮಾಡಿದ್ದಾನೆ. ಅಬ್ದುಲ್ಲಾ ಯುವಕರನ್ನು ಐಸಿಸ್ ಸಂಘಟನೆಗೆ ಸೇರಿಸುವ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕೇರಳದಿಂದ ಐಸಿಸ್ ಸೇರಲು ತೆರಳಿರುವ 21ಜನರಲ್ಲಿ 12ಜನ ಇದೇ ಪಡಾನೆ ಗ್ರಾಮದವರು.
loading...
No comments