ಗಗನ ಸಖಿಯರಿಗೆ ಲೈಂಗಿಕ ಕಿರುಕುಳ
ನಾಗಪುರ: ಮುಂಬೈನಿಂದ ನಾಗಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಇಬ್ಬರು ಗಗನ ಸಖಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಶನಿವಾರ ನಡೆದಿದೆ. ಈ ಸಂಬಂಧ ಆಕಾಶ್ ಗುಪ್ತಾ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬಂಧಿತ ವ್ಯಕ್ತಿ ಮುಂಬೈನಿಂದ ನಾಗಪುರಕ್ಕೆ ಜೆಟ್ ಏರ್ವೇಸ್ ವಿಮಾನದಲ್ಲಿ ತೆರಳುತ್ತಿದ್ದ. ವಿಮಾನದಲ್ಲಿ ಗಗನ ಸಖಿಯರು ಊಟ ವಿತರಿಸುವ ವೇಳೆ ಆಕಾಶ್ ಗುಪ್ತಾ ಅವರ ಕೈ ಹಿಡಿದು ಎಳೆದಿದ್ದ. ಸಹ ಪ್ರಯಾಣಿಕರು ಮತ್ತು ಇತರ ಸಿಬ್ಬಂದಿ ಗಗನ ಸಖಿಯರ ನೆರವಿಗೆ ಧಾವಿಸಿದ್ದರು. ಆದರೆ ಆಕಾಶ್ ಗುಪ್ತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದ. ನಂತರ ಗಗನ ಸಖಿಯರು ವಿಮಾನದ ಕ್ಯಾಪ್ಟನ್ಗೆ ಲಿಖಿತ ದೂರು ಸಲ್ಲಿಸಿದ್ದರು. ಕ್ಯಾಪ್ಟನ್ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಭದ್ರತಾ ಸಿಬ್ಬಂದಿ ವಿಮಾನ ನಾಗಪುರ ತಲುಪಿದ ತಕ್ಷಣ ಆತನನ್ನು ಬಂಧಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಆಕಾಶ್ ಗುಪ್ತಾ ಕುಡಿದ ಮತ್ತಿನಲ್ಲಿ ಗಗನ ಸಖಿಯ ಕೈ ಹಿಡಿದು ಎಳೆದಿದ್ದಾನೆ. ಆತನನ್ನು ಭಾನುವಾರ ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ಕೋರ್ಟ್ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
-pti
loading...
No comments