ನಾನೇನು ತಪ್ಪು ಮಾಡಿದೆ? ಮುಖ್ಯಮಂತ್ರಿಗೆ ಸಲಹೆ ನೀಡಿದ್ದು, ಪಕ್ಷ ಉಳಿಸಿ ಎಂದಿದ್ದು ತಪ್ಪಾ?
ಮಂಗಳೂರು : ‘ನನ್ನನ್ನು ಇವತ್ತೇ ಪಕ್ಷದಿಂದ ತೆಗೆಯಲಿ. ನನಗೆ ಸಂತೋಷವೇ. ಪಕ್ಷದಿಂದ ಕಿತ್ತೆಸೆದರೂ ನಾನು ಉಲ್ಟಾಹೊಡೆಯಲ್ಲ. ನನ್ನ ಧೋರಣೆ ಸತ್ತರೂ ಬದಲಾಗಲ್ಲ' ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇನು ತಪ್ಪು ಮಾಡಿದೆ? ಮುಖ್ಯಮಂತ್ರಿಗೆ ಸಲಹೆ ನೀಡಿದ್ದು, ಪಕ್ಷ ಉಳಿಸಿ ಎಂದಿದ್ದು ತಪ್ಪಾ? ಆದರೆ ಸಿದ್ದರಾಮಯ್ಯ ಮಾಡಿದ್ದೇನು? ಈಗ ನೋಟಿಸ್ ಬರುವುದನ್ನೇ ಕಾಯುತ್ತಿದ್ದೇನೆ. ಆದರೆ ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದರು. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಸಿದ್ದರಾಮಯ್ಯ ಜನತಾದಳ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು. ಅವರಿಗೆ 1 ರೂಪಾಯಿಗೆ ಅಕ್ಕಿ ನೀಡಲು ಸಲಹೆ ನೀಡಿದ್ದೆ. ಆದರೆ ಅವರು ಒಪ್ಪಿರಲಿಲ್ಲ. ಆಗಲೇ ‘ನಾನು ನಿಮ್ಮನ್ನು ಬಿಡುವುದಿಲ್ಲ' ಎಂದಿದ್ದೆ. ಹೀಗೆ ಹೇಳಿಲ್ಲ ಎಂದು ಧರ್ಮಸ್ಥಳ ಅಥವಾ ಕುದ್ರೋಳಿಗೆ ಬಂದು ಪ್ರಮಾಣ ಮಾಡಲಿ ನೋಡೋಣ ಎಂದರು.
loading...
No comments