Breaking News

6ರ ಬಾಲೆಗೆ ಲೈಂಗಿಕ ಕಿರುಕಳ ನೀಡಿದ ಅಂಗಡಿಮಾಲಕನ ಸೆರೆವಿಟ್ಲ : ಆರು ವರ್ಷದ ಬಾಲಕಿಗೆ ಅಂಗಡಿ ಮಾಲಿಕನೊಬ್ಬ ಲೈಂಗಿಕ ಕಿರುಕುಳ ನೀಡುತ್ತಾ ಅತ್ಯಾಚಾರ ನಡೆಸಿದ ರಾಕ್ಷಸೀ ಕೃತ್ಯ ಅಳಿಕೆ ಗ್ರಾಮದಲ್ಲಿ ನಡೆದಿದ್ದು ಆರೋಪಿ ಕಾಮುಕನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಳಿಕೆ ಗ್ರಾಮದ ಎರುಂಬು ಎಂಬಲ್ಲಿನ ಅಂಗಡಿ ಮಾಲಿಕ ಹಮೀದ್ (52) ಬಾಲಕಿಯ ಮೇಲೆ ಮೃಗೀಯ ವರ್ತನೆ ತೋರಿದ ಕಾಮುಕ. ಸಾಮಾನು ಖರೀದಿಸಲು ತನ್ನ ಅಂಗಡಿಗೆ ಬರುತ್ತಿದ್ದ ಸ್ಥಳೀಯ ಆರು ವರ್ಷ ಪ್ರಾಯದ ಬಾಲಕಿಯ ಮೇಲೆ ಒಂದೂವರೆ ತಿಂಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಹಮೀದ್ ಒಂದು ಬಾರಿ ಅತ್ಯಾಚಾರವನ್ನೂ ನಡೆಸಿದ್ದನೆನ್ನಲಾಗಿದೆ. ಮರ್ಯಾದೆ ಹೋಗುವ ಭಯದಿಂದ ತಾಯಿ ಈವರೆಗೂ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದು ಇದೀಗ ತಂದೆ ವಿದೇಶದಿಂದ ಬಂದಿರುವ ಕಾರಣ ದೂರು ದಾಖಲಾಗಿದೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತಕ್ಷಣವೇ ಸ್ಥಳಕ್ಕೆ ತೆರಳಿ ಆರೋಪಿ ಕಾಮುಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

loading...

No comments