ಆಸ್ಪತ್ರೆಗೆ ಕರೆತರುವಾಗಲೇ ಜಯಲಲಿತ ಮೃತಪಟ್ಟಿದ್ದರು ಎಂದ ಅಪೋಲೋ ಆಸ್ಪತ್ರೆ ವೈದ್ಯೆ.
ತಮಿಳುನಾಡು : ತಮಿಳುನಾಡಿನಲ್ಲಿ ಜಯಲಲಿತ ನಿಧನಾ ನಂತರ ಅಧಿಕಾರಕ್ಕಾಗಿ ಪನೀರ್ ಸೆಲ್ವಂ ಹಾಗೂ ಶಶಿಕಲಾ ಮಧ್ಯೆ ರಾಜಕೀಯ ದೊಂಬರಾಟಗಳು ನಡೆಯುತ್ತಿರುವ ಬೆನ್ನಲ್ಲೇ ಅಪೋಲೋ ಆಸ್ಪತ್ರೆಯ ವೈದ್ಯೆಯೊಬ್ಬರು ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ.
ಸಪ್ಟಂಬರ್ 22ರಂದು ಜಯಲಲಿತಾರನ್ನು ಆಸ್ಪತ್ರೆಗೆ ಕರೆತರುವಾಗಲೇ ಅವರು ಮೃತಪಟ್ಟಿದ್ದರು ಎಂದು ಅಪೋಲೋ ಆಸ್ಪತ್ರೆಯ ವೈದ್ಯೆ ಡಾ.ರಾಮ್ ಸೀತಾ ಬಹಿರಂಗವಾಗಿ ಹೇಳಿಕೆಯನ್ನು ನೀಡುವ ಮೂಲಕ ಹೊಸದೊಂದು ವಿವಾದದ ಕಿಡಿ ಹಚ್ಚಿದ್ದಾರೆ. ಜಯಲಲಿತಾರನ್ನು ಆಸ್ಪತ್ರೆಗೆ ಸೇರಿಸುವ ದಿನ ನಾನು ಕರ್ತವ್ಯದಲ್ಲಿದ್ದೆ, ಅವರನ್ನು ಕರೆತಂದಾಗ ಅವರ ಉಸಿರಾಟ ಸಂಪೂರ್ಣವಾಗಿ ನಿಂತು ಹೋಗಿತ್ತು, ಅವರು ಅದಾಗಲೇ ಮೃತಪಟ್ಟಿದ್ದರು.
ಅಷ್ಟೇ ಅಲ್ಲದೆ ಮೃತದೇಹದ ರಕ್ಷಣೆ ಮಾಡುವ ಕೆಲಸಗಳು ನಡೆಯುತ್ತಿತ್ತು, ಇದಕ್ಕಾಗಿಯೇ ವಿದೇಶಗಳಿಂದ ವೈದ್ಯರುಗಳನ್ನು ಕರೆಸಲಾಯಿತು ಎಂದಿದ್ದಾರೆ. ಆಸ್ಪತ್ರೆಯ ವೈದ್ಯರೇ ಈ ರೀತಿಯ ಹೇಳಿಕೆ ನೀಡಿರುವುದರಿಂದ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವಿನ ಬಗ್ಗೆ ಅನುಮಾನಗಳು ಮತ್ತಷ್ಟು ದಟ್ಟವಾಗಿದೆ.
loading...
No comments