Breaking News

ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷನಿಗೆ ಅವಮಾನ ಮಾಡಿದ ದ.ಕ ಜಿಲ್ಲಾ ಪಂ ಅಧ್ಯಕ್ಷೆ.

ಉಪ್ಪಿನಂಗಡಿ : ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿ ಇಳಂತಿಲಾ ಗ್ರಾಮ ಪಂಚಾಯತ್ ಅಧ್ಯಕ್ಷನಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಅವಮಾನ ಮಾಡಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ. 
ಇಳಂತಿನ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಇಸುಬು ಈ ಆರೋಪ ಮಾಡಿದ್ದು ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ನಾನಿಲ್ಲದ ಸಮಯದಲ್ಲಿ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದ್ದು ನೇರವಾಗಿ ಅಧ್ಯಕ್ಷರಿಗೆ ಮೀಸಲಾಗಿರುವ ಕುರ್ಚಿಯಲ್ಲಿ ಕುಳಿತಿದ್ದಾರೆ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಂದಿರುವ ವಿಷಯ ತಿಳಿದು ನಾನು ಪಂಚಾಯತ್ ಗೆ ಬಂದ ಬಳಿಕವೂ ಕುರ್ಚಿ ಬಿಟ್ಟುಕೊಡದೆ ನನ್ನನ್ನು ನಿಲ್ಲಿಸಿಕೊಂಡೇ ಮಾತನಾಡಿಸುವ ಮೂಲಕ ಗ್ರಾಮ ಪಂಚಾಯತ್ ಹುದ್ದೆಗೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ.
ಗ್ರಾ ಪಂ ಶಿಷ್ಟಾಚಾರದಂತೆ ಗ್ರಾ ಪಂ ಅಧ್ಯಕ್ಷರನ್ನು ಹೊರತುಪಡಿಸಿ ಬೇರೆ ಯಾರೂ ಅಧ್ಯಕ್ಷರ ಆಸನದಲ್ಲಿ ಕುಳಿತುಕೊಳ್ಳುವಂತಿಲ್ಲ. ಇದರೊಂದಿಗೆ ಸೌಜನ್ಯಕ್ಕಾದರೂ ಕುಳಿತುಕೊಳ್ಳಿ ಎಂದು ಹೇಳದೇ ನನ್ನನ್ನು ಅವರ ಎದುರಿನಲ್ಲಿ ನಿಲ್ಲಿಸಿ ಮಾತನಾಡುವ ಮೂಲಕ ನನಗೆ ಅವಮಾನ ಮಾಡಿದರಲ್ಲದೆ, ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ. ಇದು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಘನತೆಗೆ ತಕ್ಕುದಾದ ಕ್ರಮವಲ್ಲ. ಆದ್ದರಿಂದ ಇವರ ಈ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಅಧ್ಯಕ್ಷ ಇಸುಬು ಹೇಳಿದ್ದಾರೆ.
loading...

No comments