Breaking News

ಮಾದ್ಯಮಗಳ ವಿರುದ್ಧ ಕೆಂಡಾಮಂಡಲವಾದ ಅಗ್ನಿ ಶ್ರೀಧರ್.

ಬೆಂಗಳೂರು : ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಪ್ರಕರಣದಲ್ಲಿ ಅಗ್ನಿ ಶ್ರೀಧರ್ ಗೆ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಜಾಮೀನು ಸಿಕ್ಕಿದ ಬೆನ್ನಿಗೆ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅಗ್ನಿ ಶ್ರೀಧರ್ ಆಸ್ಪತ್ರೆಯ ಹೊರಗಡೆ ನೆರೆದಿದ್ದ ಪತ್ರಕರ್ತರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣ ಸಂಬಂಧ ಮನೆಯ ಮೇಲೆ ಅನಿರೀಕ್ಷಿತ ಪೋಲೀಸ್ ಧಾಳಿಯಿಂದಾಗಿ ಹೃದಯಾಘಾತವಾದ ಕಾರಣ ಕುಮಾರ ಸ್ವಾಮಿ ಲೇಔಟ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಗ್ನಿ ಶ್ರೀಧರ್ ಮೇಲೆ ಅಕ್ರಮ ಶಸ್ತ್ರಾಸ್ತ್ರ ಮತ್ತು ಅಕ್ರಮ ಮಧ್ಯ ದಾಸ್ತಾನು ಸೇರಿದಂತೆ ಹಲವು ಪ್ರಕರಣ ದಾಖಲಾಗಿವೆ. ಇಂದು ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ಪತ್ರಕರ್ತರನ್ನು ಕಂಡು ನೀವೆಲ್ಲಾ ಯಾರು ಎಂದು ಪ್ರಶ್ನಿಸಿದರು.

ಹೃದಯಾಘಾತದ ನಾಟಕವಾಡಲು ನಾನೇನು ರಾಜಕಾರಣಿಯೇ, ಮಾಧ್ಯಮಗಳಲ್ಲಿ ನಾನು ಸತ್ತೇ ಹೋಗಿದ್ದೇನೆ ಎಂಬಂತೆ ತೋರಿಸಿದ್ದೀರಿ. ಇನ್ನೂ ಆಸ್ಪತ್ರೆಯಲ್ಲಿ ನಾನು ಚಿಕಿತ್ಸೆ ಪಡೆಯಬೇಕಿತ್ತು ಆದರೆ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದೇನೆ. ಮೂರು ನಾಲ್ಕು ದಿನಗಳಿಂದ ನಿದ್ದೆ ಮಾಡಲಾಗುತ್ತಿಲ್ಲ, ನಿದ್ದೆಯಿಲ್ಲದೆ ಹುಚ್ಚನಂತಾಗಿದ್ದೇನೆ. ನನ್ನ ಮೇಲೆ ಪೋಲೀಸರು ಹಲ್ಲೆ ಮಾಡಿದ್ದಾರೆ. ಐಪಿಸಿ ಸೆಕ್ಷನ್ 307ರ ಪ್ರಕಾರ ಹಲ್ಲೆ, ಆದರೆ ಮಾದ್ಯಮದವರು ನನ್ನ ಮೇಲೆ ಪೋಲೀಸರು ಹಲ್ಲೆ ನಡೆಸಿರುವ ಬಗ್ಗೆ ತೋರಿಸಿಯೇ ಇಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
loading...

No comments