Breaking News

ಪನ್ನೀರ್ ಸೆಲ್ವಂ ಪರ ವಾಲಿದ ಎಐಎಡಿಎಂಕೆ ಶಾಸಕರು, ಶಶಿಕಲಾಗೆ ಮುಖಭಂಗ.

ಚೆನ್ನೈ : ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ನಿಧನಾನಂತರ ಮುಖ್ಯಮಂತ್ರಿ ಸ್ಥಾನಕ್ಕಾಗಿ ಎಐಡಿಎಂಕೆ ಎರಡು ಬಣಗಳಾಗಿ ಹೋಳಾಗಿ ಹೋಗಿದೆ ಒಂದು ಕಡೆ ಶಶಿಕಲಾ ನಟರಾಜನ್ ಶಾಸಕರನ್ನು ರೆಸಾರ್ಟ್ ರಾಜಕಾರಣ ಮಾಡುತ್ತಿದ್ದರೆ ಮತ್ತೊಂದೆಡೆ ಪನ್ನೀರ್ ಸೆಲ್ವಂ ಶಾಸಕರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.

ಈಗಿನ ಮಾಹಿತಿಯ ಪ್ರಕಾರ ಶಶಿಕಲಾ ಬಣದಲ್ಲಿದ್ದ ಹಲವು ಶಾಸಕರು  ರೆಸಾರ್ಟ್ ತೊರೆದು ಪನ್ನೀರ್ ಸೆಲ್ವಂ ಗುಂಪಿಗೆ ಸೇರಿದ್ದು ಈಗ ಪನ್ನೀರ್ ಸೆಲ್ವಂ ಪರ 65ಶಾಸಕರು ಹಾಗೂ ಹೆಚ್ಚಿನ ಸಂಸದರ ಬೆಂಬಲವಿರುವುದರಿಂದ ಪನ್ನೀರ್ ಸೆಲ್ವಂ ಕೈ ಮೇಲಾಗಿದೆ.

ಎಐಡಿಎಂಕೆ ಪಕ್ಷದ ಎಲ್ಲಾ ಶಾಸಕರನದನು ಗೋಲ್ಡನ್ ಬೇ ರೆಸಾರ್ಟ್ನಲ್ಲಿ ಕೂಡಿಟ್ಟು ಮುಖ್ಯಮಂತ್ರಿಯಾಗ ಹೊರಟ ಶಶಿಕಲಾ ನಟರಾಜನ್ ಗೆ ರೆಸಾರ್ಟಲ್ಲಿದ್ದ 65 ಶಾಸಕರು ಪನ್ನೀರ್ ಸೆಲ್ವಂ ಬಣಕ್ಕೆ ಸೇರಿದ್ದರಿಂದ ಭಾರೀ ಹೊಡೆತ ಬಿದ್ದಿದೆ. ತಮ್ಮ ಭವಿಷ್ಯ ರಾಜಕಾರಣದ ದೃಷ್ಟಿಯಿಂದ ಶಾಸಕರು ಪನ್ನೀರ್ ಸೆಲ್ವಂ ಬೆನ್ನಿಗೆ ನಿಂತಿದ್ದಾರೆ ಎಂದು ತಿಳಿದು ಬಂದಿದೆ.

ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ತಡ ಮಾಡುತ್ತಿರುವುದರಿಂದ ಶಶಿಕಲಾ ನಟರಾಜನ್ ರಾಜಭವನದ ಮುಂದೆ ರಾಜ್ಯಪಾಲರ ವಿರುದ್ಧ ನಿರ್ಧರಿಸಿರುವುದರಿಂದ ,ಪ್ರತಿಭಟನೆಗಳು ಉಂಟಾಗಬಹುದು ಎಂದು ಭಾರೀ ಪೋಲೀಸ್ ಬಂದೋಬಸ್ತು ಮಾಡಲಾಗಿದೆ.
loading...

No comments