Breaking News

ಸಂಘಪರಿವಾರದ ಬೆದರಿಕೆಗೆ ಡೋಂಟ್ ಕ್ಯಾರ್, ಕೇರಳ ಮುಖ್ಯಮಂತ್ರಿಗೆ ಸಿಪಿಐಎಂ ಕಾರ್ಯಕರ್ತರ ಅದ್ದೂರಿ ಸ್ವಾಗತ.

ಮಂಗಳೂರು : ಮಂಗಳೂರಿನಲ್ಲಿ ಸಿಪಿಐಎಂ ನೇತೃತ್ವದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಕರಾವಳಿ ಸೌಹಾರ್ಧ ಸಮಾವೇಶಕ್ಕೆ ಸಂಘಪರಿವಾರದ ವಿರೋಧದ ನಡುವೆಯೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸಿದ್ದಾರೆ. ಮಲಬಾರ್ ಎಕ್ಸ್ ಪ್ರೆಸ್ ರೈಲಿನ ಮೂಲಕ ಕೇರಳದಿಂದ ಮಂಗಳೂರಿಗೆ ಆಗಮಿಸುವ ಸಂಘಪರಿವಾರದ ಬೆದರಿಕೆಗೆ ಸೆಡ್ಡುಹೊಡೆದರು.
ತಮ್ಮ ನೆಚ್ಚಿನ ನಾಯಕನ ಬರುವಿಕೆಗಾಗಿ ಮೊದಲೇ ರೈಲ್ವೇ ನಿಲ್ದಾಣದಲ್ಲಿ ನೆರೆದಿದ್ದ ಸಿಪಿಐಎಂ ಕಾರ್ಯಕರ್ತರು ಲಾಲ್ ಸಲಾಂ ಘೋಷಣೆಯೊಂದಿಗೆ ಪಿಣರಾಯಿ ವಿಜಯನ್ ಅವರನ್ನು ಸ್ವಾಗತಿಸಿದರು. ಕೇರಳ ಮುಖ್ಯಮಂತ್ರಿ ಆಗಮನ ಕಾರಣದಿಂದ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಸಿಎಂ ಭದ್ರತಾ ಅಧಿಕಾರಿಗಳು ಹಾಗೂ ಕರ್ನಾಟಕ ಪೋಲೀಸರ ಮಧ್ಯೆ ವಾಹನದ ವಿಷಯದಲ್ಲಿ ವಾಗ್ವಾದ ಕೂಡ ನಡೆಯಿತು. ಮಂಗಳೂರಿಗೆ ಬಂದಿರುವ ಸಿಎಂ ಪಿಣರಾಯಿ ವಿಜಯನ್ ರಕ್ಷಣೆ ನಮ್ಮ ಹೊಣೆ ಎಂದು ಮಂಗಳೂರು ಪೋಲೀಸರು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ಹಾಗೂ ಕೇರಳ ಪೋಲೀಸರ ಮಧ್ಯೆ ತಳ್ಳಾಟ ಕೂಡ ನಡೆಯಿತು. ನಂತರ ಕೇರಳ ಸಿಎಂ ಕರ್ನಾಟಕ ಪೋಲೀಸರ ಬುಲೆಟ್ ಪ್ರೂಫ್ ವಾಹನದಲ್ಲಿ ತೆರಳಿದರು.
loading...

No comments