ವೀಡಿಯೋ ನೋಡಿ, ಈ ಮಹಿಳೆಯದ್ದು ಬುದ್ದಿವಂತಿಕೆಯೋ ಮೂರ್ಖತನವೋ ನೀವೇ ನಿರ್ಧರಿಸಿ.
ವೀಡಿಯೋ : ಗೂಡ್ಸ್ ರೈಲೊಂದು ಮಹಿಳೆ ಮೇಲುಗಡೆಯಿಂದ ಹಾದು ಹೋದರು ಮಹಿಳೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈಗಾಗಲೇ 40ಲಕ್ಷಕ್ಕೂ ಅಧಿಕ ಮಂದಿ ವೀಡಿಯೋ ನೋಡಿದ್ದು ಯಾರೋ ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದ ವೀಡಿಯೋ ಇದಾಗಿದೆ.
ಆದರೆ ಈ ವೀಡಿಯೋದಲ್ಲಿನ ಘಟನೆ ನಡೆದಿರೋದು ಎಲ್ಲಿ ಆ ಮಹಿಳೆ ಯಾರು ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ.ಆದರೆ ಕೆಲವು ಮಾಹಿತಿ ಪ್ರಕಾರ ಆ ಮಹಿಳೆ ರೈಲ್ವೇ ಹಳಿ ಮೂಲಕ ಒಂದು ಫ್ಲಾಟ್ ಫಾರಂನಿಂದ ಇನ್ನೊಂದು ಫ್ಲಾಟ್ ಪಾರ್ಮ್ ಗೆ ದಾಟಲು ಯತ್ನಿಸುವಾಗ ಈ ಘಟನೆ ಸಂಭವಿಸಿದೆ. ಪ್ಲಾಟ್ ಫಾರಂನಿಂದ ರೈಲ್ವೇ ಹಳಿಗೆ ಮಹಿಳೆ ಇಳಿಯುತ್ತಿದ್ದಂತೆ ಗೂಡ್ಸ್ ಟ್ರೈನ್ ರಭಸವಾಗಿ ಬಂದಿದೆ, ತಕ್ಷಣ ಮಹಿಳೆ ರೈಲ್ವೇ ಹಳಿಗಳ ಮಧ್ಯೆ ಮಲಗುವ ಮೂಲಕ ತನ್ನ ಪ್ರಾಣ ಕಾಪಾಡಿಕೊಂಡಿದ್ದಾಳೆ.
ಮಹಿಳೆ ಜಾಣತನದಿಂದ ತನ್ನ ಪ್ರಾಣ ಉಳಿಸಿಕೊಂಡಿದ್ದರೂ ರೈಲ್ವೇ ಹಳಿ ಮೂಲಕ ಇನ್ನೊಂದು ಫ್ಲಾಟ್ ಪಾರಂಗೆ ಬರಲು ಪ್ರಯತ್ನಿಸಿದ್ದು ಮೂರ್ಖತನವೇ ಸರಿ. ಭಾರತದಲ್ಲಿ ಅದೆಷ್ಟೋ ಜನ ತಮ್ಮ ಇಂತಹ ಮೂರ್ಖತನಕ್ಕೆ ಪ್ರಾಣ ತೆತ್ತಿದ್ದಾರೆ.ಈ ವೀಡಿಯೋ ಒಂದು ಪಾಠವಾಗಲಿದೆ.
ವೀಡಿಯೋ ನೋಡಿ :
loading...
No comments