Breaking News

ಮಂಗಳೂರಿನಲ್ಲಿ ಖಾಕಿ ಸರ್ಪಗಾವಲು


ಅವಹೇಳನಕಾರಿ, ಕೋಮುಪ್ರಚೋದಕ, ಉದ್ರೇಕಕಾರಿ ಸುಳ್ಳು ಸುದ್ದಿಗಳನ್ನು ಅಂತರ್ಜಾಲ ತಾಣದ ಮೂಲಕ ಪಸರಿಸುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ

ಮಂಗಳೂರು :ಹಿಂದೂ ಸಂಘಟನೆಗಳ ಪ್ರಭಲ ವಿರೋಧದ ನಡುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ  ವಿಜಯನ್ ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ನಗರದ ವಿವಿಧ ಕಡೆಗಳಲ್ಲಿ 600 ಸೀಸಿ ಕ್ಯಾಮೆರಾಗಳನ್ನು ಅಳವಡಿಸಿ ಕಣ್ಗಾವಲು ವಹಿಸಲಾಗಿದೆ. 6 ಡ್ರೋಣ್ ಕ್ಯಾಮೆರಾಗಳ ಮೂಲಕ ಬಂದೋಬಸ್ತ್ ನಡೆಸಲಾಗುತ್ತಿದೆ. ರೌಡಿಶೀಟರುಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದ್ದು, 120 ಜನರಿಂದ 5ರಿಂದ 10 ಲಕ್ಷದವರೆಗೆ ಬಾಂಡ್ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಹೇಳಿದ್ದಾರೆ.

ಸುದ್ದಿಗಾರರಲ್ಲಿ ಭದ್ರತಾ ವಿಚಾರಗಳ ಬಗ್ಗೆ ಮಾಹಿತಿ ನೀಡಿದ ಅವರು, “ಬಂದ್ ಕರೆ ನೀಡಲು ಯಾರಿಗೂ ಅವಕಾಶ ಇಲ್ಲ. ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಬಂದ್ ನಡೆಸಲು ಸಾದ್ಯವಿಲ್ಲ. ಈಗಾಗಲೇ 44 ಮಂದಿಗೆ ನೊಟೀಸ್ ಜಾರಿಮಾಡಲಾಗಿದೆ. ಕಾನೂನು ಭಂಜಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.

ಕೇರಳ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಯಾರೂ ಕೂಡಾ ಬಂದ್ ಕರೆ ನೀಡಿಲ್ಲ. ನಾವು ಹರತಾಳ ನಡೆಸಲು ಮಾತ್ರ ಹೇಳಿದ್ದೇವೆ ಎಂದು ಹರತಾಳಕ್ಕೆ ಕರೆ ನೀಡಿರುವ ಸಂಘಟನೆಗಳು ಹೇಳಿವೆ ಎಂದು ಕಮಿಷನರ್ ಹೇಳಿದರು.

ಅವಹೇಳನಕಾರಿ, ಕೋಮುಪ್ರಚೋದಕ, ಉದ್ರೇಕಕಾರಿ ಸುಳ್ಳು ಸುದ್ದಿಗಳನ್ನು ಅಂತರ್ಜಾಲ ತಾಣದ ಮೂಲಕ ಪಸರಿಸುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ಕಮಿಷನರ್, ಇನ್ನೊಬ್ಬರ ವಿಚಾರಗಳಿಗೆ ಕಿವಿಗೊಡದೇ, ಸಂದೇಹಗಳು ಬಂದಾಗ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಿ ಎಂದರು.

ನಗರದಲ್ಲಿ ಹೆಚ್ಚಿನ ಭದ್ರತೆ ಅಗತ್ಯವಿರುವ ಕಾರಣ ಹೆಚ್ಚುವರಿ ಪೊಲೀಸರನ್ನು ಹೊರ ಜಿಲ್ಲೆಗಳಿಂದ ಕರೆಸಿಕೊಳ್ಳಲಾಗಿದೆ. ಸುಮಾರು 2000 ಪೊಲೀಸರು, 20 ಕೆ ಎಸ್ ಆರ್ ಪಿ ತುಕಡಿ ಶೀಘ್ರದಲ್ಲೇ ಜಿಲ್ಲೆಗೆ ಆಮಿಸಿ ಕಾರ್ಯನಿರ್ವಹಿಸಲಿದೆ ಎಂದರು. 1500 ಪೊಲೀಸರನ್ನು ನಿಯೋಜಿಸಲಾಗಿದೆ. 6 ಎಸ್ಪಿ, 10 ಡಿವೈಎಸ್ಪಿ, 20 ಪೊಲೀಸ್ ಇನಸ್ಪೆಕ್ಟರ್ ಬಂದೋಬಸ್ತಿಗಾಗಿ ನೇಮಿಸಲಾಗಿದೆ ಎಂದರು.

loading...

No comments