ಪಿಣರಾಯಿ ವಿಜಯನ್ ಫೆ 25 ರಂದು ಮಂಗಳೂರಿಗೆ ಆಗಮಿಸುವುದು ಬಹುತೇಕ ಖಚಿತ
ಮಂಗಳೂರು : ಭಾರೀ ಕುತೂಹಲ ಸೃಷ್ಟಿಸಿರುವ ಕೇರಳ ಸೀಎಂ ಪಿಣರಾಯಿ ವಿಜಯನ್ ಅವರ ಆಗಮನಕ್ಕೆ ಹಿಂದೂ ಸಂಘಟನೆ ಮತ್ತು ಬಿಜೆಪಿ ವಿರೋಧ ವ್ಯಕ್ತ ಪಡಿಸಿ 25ರಂದು ಬಂದ್ಗೆ ಕರೆ ನೀಡಿದೆ ಈ ಎಲ್ಲಾ ಬೆಳೆವಣಿಗೆಗಳಿಗೆ ಸೊಪ್ಪು ಹಾಕದ ಸಿಪಿಎಂ ಪಿಣರಾಯಿ ವಿಜಯನ್ ಫೆ 25 ರಂದು ಮಂಗಳೂರಿಗೆ ಆಗಮಿಸುವುದು ಬಹುತೇಕ ಖಚಿತ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ
25ರಂದು ಬೆಳಿಗ್ಗೆ 8 ಗಂಟೆಗೆ ಕಾಸರಗೋಡಿನಿಂದ ಮಂಗಳೂರಿಗೆ ಆಗಮನ, 11 ಗಂಟೆಗೆ ನಗರದ ಅತ್ತಾವರ ರಸ್ತೆಯ ಐಎಂಎ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿ, ಮಧ್ಯಾಹ್ನ 3 ಗಂಟೆಗೆ ಪುರಭವನದಲ್ಲಿ ಎಕೆಜಿ ಬೀಡಿ ಕಾರ್ಮಿಕರ ಸಹಕಾರಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿ, ಸಂಜೆ 3.30ಕ್ಕೆ ನೆಹರೂ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಜೆ 5.45ಕ್ಕೆ ಮಂಗಳೂರಿನಿಂದ ರೈಲಿನ ಮೂಲಕ ತಿರುವನಂತಪುರಂ ತೆರಳುವರು ಎಂದು ಹೇಳಲಾಗಿದೆ
loading...
No comments