ಜಯಾ ಹುಟ್ಟುಹಬ್ಬದಂದೇ ದೀಪಾ ಜಯಕುಮಾರ್ ಹೊಸ ಪಕ್ಷದ ಕಛೇರಿ ಉದ್ಘಾಟನೆ.
ಚೆನ್ನೈ : ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತ ಹುಟ್ಟುಹಬ್ಬವಾದ ಇಂದು ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಕ್ಷದ ಉದಯವಾಗಿದೆ. ಜಯಲಲಿತಾ ಅಣ್ಣನ ಮಗಳಾದ ದೀಪಾ ಜಯಕುಮಾರು ತಮ್ಮ ಹೊಸ ಪಕ್ಷದ ಕಛೇರಿಯನ್ನು ತಮ್ಮ ಚೆನ್ನೈ ನಿವಾಸದಲ್ಲಿನ ಸಾವಿರಾರು ಜಯಲಲಿತ ಅಭಿಮಾನಿಗಳ ಸಮ್ಮುಖದಲ್ಲಿ ಉದ್ಘಾಟನೆ ಮಾಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ದೀಪಾ ಜಯಕುಮಾರ್ ತಮ್ಮ ರಾಜಕೀಯ ಭವಿಷ್ಯವನ್ನು ಜಯಾ ಹುಟ್ಟುಹಬ್ಬದಂದು ನಿರ್ಧರಿಸುವುದಾಗಿ ಹೇಳಿದ್ದರು. ಹೇಳಿದ ಮಾತಿನಂತೆಯೆ ತಮಿಳುನಾಡು ರಾಜಕಾರಣಕ್ಕೆ ಜಯಲಲಿತಾ ಹುಟ್ಟುಹಬ್ಬದಂದೇ ಅದ್ದೂರಿಯಾಗಿ ಕಾಲಿಟ್ಟಿದ್ದಾರೆ. ಪಕ್ಷದ ಕಛೇರಿ ಉದ್ಘಾಟನೆಯಾಗಿದ್ದರೂ ಪಕ್ಷದ ಹೆಸರು, ಲಾಂಛನ ಸಂಜೆ ಘೋಷಿಸುವುದಾಗಿ ಹೇಳಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ದೀಪಾ ಜಯಕುಮಾರ್ ತಮ್ಮ ಹೊಸ ಪಕ್ಷಕ್ಕೆ ಅಮ್ಮಾ ಡಿಎಂಕೆ ಎಂದು ಹೆಸರಿಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇಂದು ಪಕ್ಷದ ಕಛೇರಿ ಉದ್ಘಾಟನೆ ಸಮಾರಂಭದಲ್ಲಿ ಜಯಾ ನಿಷ್ಠರು, ಎಐಎಡಿಎಂಕೆ ಪಕ್ಷದಿಂದ ಸಿಡಿದು ಹೊರಬಂದವರು ಹಾಗೂ ಹಿರಿಯ ಮುಖಂಡರು ಹಾಜರಿದ್ದು, ದೀಪಾಗೆ ಬೆಂಬಲ ಸೂಚಿಸಿದರು.
loading...
No comments