Breaking News

ಜನಾಂಗೀಯ ದ್ವೇಷಕ್ಕೆ ಅಮೆರಿಕಾದಲ್ಲಿ ಭಾರತೀಯ ಇಂಜಿನಿಯರ್ ಬಲಿ.

ಅಮೇರಿಕ : ಅಮೇರಿಕಾದ ಕನ್ಸಾಸ್ ನಲ್ಲಿ ಜನಾಂಗೀಯ ದಾಳಿಗೆ ಭಾರತೀಯ ಮೂಲದ ಇಂಜಿನಿಯರ್ ಬಲಿಯಾಗಿದ್ದಾನೆ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಭಾರತೀಯರಿಬ್ಬರನ್ನು ಅರಬ್ ಪ್ರಜೆಗಳೆಂದು ತಿಳಿದ ಅಮೇರಿಕನ್ ಪ್ರಜೆಯೊಬ್ಬ ಜನಾಂಗೀಯ ನಿಂದನೆ ಮಾಡಿ "ನನ್ನ ದೇಶದಿಂದ ಹೊರಹೋಗಿ" ಎಂದು ಕಿರುಚುತ್ತಾ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಶ್ರೀನಿವಾಸ್ ಕುಚಿಬೋತ್ಲ (ಎಡಗಡೆ) , ಅಲೋಕ್ ಮದಸಾನಿ (ಬಲಗಡೆ)
ಗುಂಡಿನ ದಾಳಿಗೆ ಬಲಿಯಾದ ಭಾರತೀಯನನ್ನು ಶ್ರೀನಿವಾಸ ಕುಚಿಬೋತ್ಲಾ(32) ಎಂದು ಗುರುತಿಸಲಾಗಿದ್ದು ಆತನ ಜೊತೆಗಿದ್ದ ಸ್ನೇಹಿತ ಅಲೋಕ್ ಮದಸಾನಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಇಬ್ಬರೂ ಜರ್ಮಿನ್ ಕಂಪನಿಯಲ್ಲಿ ಏವಿಯೇಷನ್ ಸಿಸ್ಟಂಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಹತ್ಯೆ ಮಾಡಿದ ಆರೋಪಿ ಆಡಂ ಫುರಿಂಟೋ ಅಮೇರಿಕನ್ ನೌಕಾಪಡೆಯ ನಿವೃತ್ತ ಸಿಬ್ಬಂದಿಯಾಗಿದ್ದಾನೆ.
ಈ ದುರ್ಘಟನೆ ಸೌತ್ ಓಲೇತ್ ನಲ್ಲಿರುವ ಆಸ್ಟಿನ್ಸ್ ಬಾರ್ ಅಂಡ್ ಗ್ರಿಲ್ ನಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಭಾರತೀಯರನ್ನು ಕಾಣುತ್ತಿದ್ದಂತೆ ಇಬ್ಬರನ್ನೂ ಅರಬ್ಬೀ ಪ್ರಜೆಗಳೆಂದು ತಿಳಿದು ಜನಾಂಗೀಯ ನಿಂದನೆ ಮಾಡಲು ಆರಂಭಿಸಿದ ಆಡಂ ಪುರಿಂಟೋ 'ನನ್ನ ದೇಶದಿಂದ ತೊಲಗಿ' ಎಂದು ಕಿರುಚುತ್ತಾ ತನ್ನಲ್ಲಿದ್ದ ರಿವಾಲ್ವರ್ ತೆಗೆದು ಗುಂಡು ಹಾರಿಸಿದ್ದಾನೆ.
ಆರೋಪಿ ಆಡಂ ಪುರಿಂಟೋ
ಭಾರತೀಯರ ಮೇಲೆ ಗುಂಡು ಹಾರಿಸಿದ ಆರೋಪಿ ಪಕ್ಕದಲ್ಲಿನ ಇನ್ನೊಂದು ಬಾರ್ ಗೆ ತೆರಳಿ ಮದ್ಯಪಾನ ಮಾಡಲು ಶುರು ಮಾಡಿದ್ದಾನೆ. ಇಬ್ಬರು ಅರಬ್ಬರನ್ನು ತಾನು ಕೊಂದಿರುವುದಾಗಿ, ತನಗೆ ಅಡಗಿಕೊಳ್ಳಲು ಜಾಗ ನೀಡಿ ಎಂದು ಬಾರ್ ಸಿಬ್ಬಂದಿಗೆ ಹೇಳಿದ್ದಾನೆ. ಆದರೆ ಬಾರ್ ಸಿಬ್ಬಂದಿ ಪೋಲೀಸರಿಗೆ ಪೋನ್ ಮಾಡಿ ಆರೋಪಿಯನ್ನು ಬಂಧಿಸಲು ಸಹಕರಿಸಿದ್ದಾನೆ.
ಅಮೆರಿಕಾದಲ್ಲಿನ ಭಾರತೀಯ ರಾಯಭಾರ ಕಛೇರಿ ಗಾಯಾಳು ಮತ್ತು ಮೃತನ ಬಗ್ಗೆ ಎಲ್ಲಾ ರೀತಿಯ ನೆರವು ನೀಡಲು ಮುಂದೆ ಬಂದಿದ್ದು ತನಿಖೆಗೆ ಸಹಕಾರ ನೀಡುತ್ತಿದೆ. ಎಫ್.ಬಿ.ಐ ಘಟನೆಯ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ಮಾಡುತ್ತಿದೆ.
loading...

No comments