ದೇಶದ ಮೊಟ್ಟ ಮೊದಲ ಸ್ಟಾರ್ಟ್ ಅಪ್ ನಗರಕ್ಕೆ ಮಂಗಳೂರು ಆಯ್ಕೆ
ಮಂಗಳೂರು : ಕೃಷಿ, ಮಾಹಿತಿ ತಂತ್ರಜ್ಞಾನ, ಫಾರ್ಮಸಿ ಮತ್ತು ಮೆಡಿಕಲ್ ವಲಯದಲ್ಲಿ ಹೊಸ ಕಂಪೆನಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶದ ಮೊಟ್ಟ ಮೊದಲ ಸ್ಟಾರ್ಟ್ ಅಪ್ ನಗರ ಜಿಲ್ಲೆಯಾಗಿ ಮಂಗಳೂರು ಆಯ್ಕೆಯಾಗಿದೆ.
ಕರ್ನಾಟಕದ ರಾಜ್ಯಸಭಾ ಸದಸ್ಯೆ, ಕೇಂದ್ರ ಕೈಗಾರಿಕಾ ಸಚಿವೆ ನಿರ್ಮಲಾ ಸೀತರಾಮನ್ ಪ್ರಯತ್ನದ ಫಲವಾಗಿ ದೇಶದಲ್ಲೇ ಮೊದಲ ಸ್ಟಾರ್ಟ್ ಅಪ್ ಜಿಲ್ಲೆಯಾಗಿ ಶೈಕ್ಷಣಿಕವಾಗಿ ಮಂಚೂಣಿಯಲ್ಲಿರುವ ಮಂಗಳೂರನ್ನು ಆರಿಸಿಕೊಳ್ಳಲಾಗಿದೆ.
ಸ್ಟಾರ್ಟ್ ಅಪ್ ಜಿಲ್ಲೆ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಒಂದು ಇಂಕ್ಯುಬೇಷನ್ ಸೆಂಟರ್ ಮತ್ತು ಜಿಲ್ಲೆಯ ಆಯ್ದ ಶಾಲಾ ಕಾಲೇಜುಗಳಲ್ಲಿ ಇಪ್ಪತ್ತು ಟಿಂಕರಿಂಗ್ ಲ್ಯಾಬುಗಳನ್ನು ಸ್ಥಾಪಿಸಲಾಗುವುದು. ಇಂಕ್ಯುಬೇಷನ್ ಸೆಂಟರ್ ಹೊಸ ಉದ್ದಿಮೆ ಅಥವಾ ಪ್ರಾಜೆಕ್ಟುಗಳಿಗೆ ಕಾವು ನೀಡಲಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾಪಿಸಲಾಗುವ ಟಿಂಕರಿಂಗ್ ಲ್ಯಾಬುಗಳ ಮೂಲಕ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಪರಿಚಯ ಮತ್ತು ಯೋಜನೆಗಳನ್ನು ತಿದ್ದಿ ತೀಡಿ ಸ್ಪುಟಗೊಳಿಸಲು ಸಹಾಯಕವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ, ಮಾಹಿತಿ ತಂತ್ರಜ್ಞಾನ, ಫಾರ್ಮಸಿ ಮತ್ತು ಮೆಡಿಕಲ್ ವಲಯದಲ್ಲಿ ಹೊಸ ತಂತ್ರಜ್ಞಾನ, ಸೇವಾ ವ್ಯವಸ್ಥೆ, ನವೀನ ಪರಿಹಾರೋಪಾಯಗಳನ್ನು ಅಭಿವೃದ್ಧಿಪಡಿಸುವವರಿಗೆ ಕೇಂದ್ರ ಸರಕಾರದ ಸ್ಟಾರ್ಟ್ ಅಪ್ ಯೋಜನೆ ಪ್ರಕಾರ ಎಲ್ಲ ರೀತಿಯ ಬೆಂಬಲ ನೀಡಲಿದೆ.
ತಾಂತ್ರಿಕ ಬೆಂಬಲ ಮಾತ್ರವಲ್ಲದೆ ಮೂಲಭೂತ ಸೌಕರ್ಯಗಳಾದ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಮತ್ತು ಡಿಜಿಟಲ್ ನೆಟ್ವರ್ಕಿಗೆ ಬೇಕಾದ ಅನುದಾನವನ್ನು ಯೋಜನೆಗಳಿಗೆ ಬೆಂಬಲವಾಗಿ ವೆಚ್ಚಮಾಡಲಿದೆ.
ಸ್ಟಾರ್ಟ್ ಅಪ್ ಅಂದರೆ ಡಿಜಿಟಲ್ ನೆಟ್ವರ್ಕ್ ಅಥವಾ ಮಾಹಿತಿ ತಂತ್ರಜ್ಞಾನ ಉಪಯೋಗಿಸಿ ಹೊಸದಾಗಿ ಆರಂಭಿಸಿದ ಕಿರು ಉದ್ಯಮವಾಗಿದ್ದು, ವೇಗವಾಗಿ ಬೆಳೆಯುವ ಸಾಮರ್ಥ್ಯ ಹೊಂದಿರುತ್ತದೆ. ಇವು ಸಾಮಾನ್ಯವಾಗಿ ಒಂದು ಕಂಪೆನಿ ರೂಪದ ವಾಣಿಜ್ಯ ಸಂಸ್ಥೆಯಾಗಿದ್ದು, ಮುಖ್ಯವಾಗಿ ತಂತ್ರಜ್ಞಾನವನ್ನು ಅವಲಂಬಿಸಿ ಹೊಸ ಉತ್ಪನ್ನ, ಸೇವೆ, ಪೆÇ್ರಸೆಸ್ ಸೇವೆಯನ್ನು ನೀಡುತ್ತವೆ.
ಕೇಂದ್ರ ಸರಕಾರದ ವ್ಯಾಖ್ಯಾನ ಪ್ರಕಾರ ಸ್ಟಾರ್ಟ್ ಅಪ್ ಕಂಪನಿಯು ಐದು ವರ್ಷಗಳಿಂದ ಕಡಿಮೆ ವಯೋಮಾನದ ಇಪ್ಪತ್ತೈದು ಕೋಟಿ ರೂಪಾಯಿಗಿಂತ ಕಡಿಮೆ ಬಂಡವಾಳ ಹೂಡಿಕೆಯ ಹೊಸದಾದ ಉತ್ಪನ್ನ, ಪೆÇ್ರಸೆಸ್, ಸೇವೆಗಳನ್ನು ನೀಡುವ ಕಂಪೆನಿ ಆಗಿರುತ್ತದೆ.
ದೇಶದಲ್ಲಿ ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ ಮತ್ತು ದೊಡ್ಡ ಪ್ರಮಾಣದ ಉದ್ಯೋಗ ಅವಕಾಶಗಳನ್ನು ಉಂಟುಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಕಾರಣಕ್ಕಾಗಿ ಸ್ಟಾರ್ಟ್ ಅಪ್ ಪರಿಕಲ್ಪನೆಗೆ ರಾಜ್ಯದಲ್ಲಿ ಮೊದಲಿಗೆ ಉತ್ತೇಜನ ನೀಡಲಾಯಿತು. ಅನಂತರ ಕೇಂದ್ರ ಸರಕಾರ ಕೂಡ ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಗಳಿಗೆ ಪೆÇೀಷಣೆಗೆ ಒಂದು ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಂತೆ ಸ್ಟಾರ್ಟ್ ಅಪ್ ಪರಿಕಲ್ಪನೆಗೆ ಉತ್ತೇಜನ ನೀಡಲು ಮುಂದಾಗಿದೆ.
ಬೆಂಗಳೂರು ಮತ್ತು ಹೈದರಾಬಾದ್ ಮಹಾನಗರಗಳಲ್ಲಿ ಮಾತ್ರ ಸ್ಟಾರ್ಟ್ ಅಪ್ ಘಟಕಗಳು ಹೆಚ್ಚಾಗಿ ಆರಂಭವಾಗುವುದನ್ನು ನಿಯಂತ್ರಿಸಲು ಇದೇ ಮೊದಲ ಬಾರಿಗೆ ಮೂಲಭೂತ ಸೌಕರ್ಯ, ಸಂಪನ್ಮೂಲ, ತಾಂತ್ರಿಕ ಸಂಪರ್ಕ ಇರುವ ಮಂಗಳೂರನ್ನು ಸ್ಟಾಟ್ ಅಪ್ ಜಿಲ್ಲೆಗೆ ಆಯ್ಕೆ ಮಾಡಲಾಗಿದೆ.
ಸ್ಟಾರ್ಟ್ ಅಪ್.ಗಳಿಗೆ ನಿಜವಾದ ಭವಿಷ್ಯ ಇರುವುದು ಮೆಟ್ರೊ ನಗರಗಳಲ್ಲಿ ಅಲ್ಲ, ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಎಂದು ಈಗಾಗಲೇ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ, ಸ್ಟಾರ್ಟ್ ಅಪ್ ಯೋಜನೆಗಳಿಗೆ ಬಹುದೊಡ್ಡ ಸವಾಲು ಇರುವುದೇ ಆರ್ಥಿಕ ಸಂಪನ್ಮೂಲದ ಕೊರತೆ.
-kale
loading...
No comments