Breaking News

ರಾಜ್ಯಸಭೆಯಲ್ಲಿ ಗುಡುಗಿದ ಪ್ರಧಾನಿ ಮೋದಿ




ಹೊಸದಿಲ್ಲಿ: ವಿರೋಧ ಪಕ್ಷಗಳ ಗದ್ದಲದ ನಡುವೆಯೂ ರಾಜ್ಯಸಭೆಯಲ್ಲಿ ಹಲವಾರು ವಿಚಾರಗಳಿಗೆ ಮೋದಿಯವರು ಸ್ಪಷ್ಟನೆ ನೀಡಿದರು 

ನರೇಂದ್ರ ಮೋದಿ ಈ ವಿಚಾರಗಳನ್ನು ಪ್ರಸ್ತಾಪಿಸಿದರು. 

* ದೇಶದ ಅರ್ಥವ್ಯವಸ್ಥೆಯಲ್ಲಿ ಆರ್‌ಬಿಐ ಪಾತ್ರದ ಬಗ್ಗೆ ನಾವು ಸಕಾರಾತ್ಮಕವಾಗಿರಬೇಕು.

* ಎಲ್ಲ ವಿವಾದಗಳಿಗೆ ಆರ್‌ಬಿಐ ಮತ್ತು ಆರ್‌ಬಿಐ ಗವರ್ನರ್‌ ಅವರನ್ನು ಎಳೆದು ತರುವ ಅಗತ್ಯವಿಲ್ಲ.


* ನೀವ್ಯಾಕೆ ಡಿಜಿಟಲ್‌ ತಂತ್ರಜ್ಞಾನದ ಮೇಲೆ ಕೋಟಿಗಟ್ಟಲೆ ಹಣ ಏಕೆ ಖರ್ಚು ಮಾಡುತ್ತೀರಿ ಎಂದು ಆನಂದ್‌ ಶರ್ಮಾಜಿ ಪ್ರಶ್ನಿಸುತ್ತಾರೆ. BHIM app ಅಭಿವೃದ್ಧಿಪಡಿಸಲು ಒಂದು ಪೈಸೆಯನ್ನೂ ಹೆಚ್ಚುವರಿ ಖರ್ಚು ಮಾಡಿಲ್ಲ.

* ನಾವು ಇವಿಎಂ ಗಳಲ್ಲಿ ಮತದಾನ ಆರಂಭಿಸಿದಾಗ ಈ ವ್ಯವಸ್ಥೆಗೆ ಭಾರತ ಇಷ್ಟು ಸುಲಭವಾಗಿ ಹೊಂದಿಕೊಳ್ಳಬಹುದು ಎಂದು ಯಾರಾದರೂ ಯೋಚಿಸಿದ್ದರೇ?

* ನಮ್ಮ ದೇಶದ ಶಕ್ತಿಯನ್ನು ನಾವು ಕೀಳಾಗಿ ಅಂದಾಜಿಸಬಾರದು.

* ನೀವು ಬೇರೆಯವರನ್ನುಟೀಕಿಸುವುದಾದರೆ, ನಿಮ್ಮ ಕುರಿತ ಟೀಕೆಗಳನ್ನೂ ಸ್ವೀಕರಿಸುವ ತಾಳ್ಮೆ ಇರಬೇಕು. ನೀವು ಕೊಟ್ಟ ನಾಣ್ಯವನ್ನೇ ನಾವು ಹಿಂದಿರುಗಿಸಿಕೊಡಬಲ್ಲೆವು.

* ಬಾತ್‌ರೂಂ ಒಳಗೆ ರೈನ್‌ಕೋಟ್‌ ಹಾಕಿಕೊಂಡು ಸ್ನಾನ ಮಾಡುವ ಕಲೆ ಡಾ. ಮನಮೋಹನ್‌ ಸಿಂಗ್‌ ಅವರಿಗಿಂತ ಚೆನ್ನಾಗಿ ಯಾರಿಗೂ ಸಿದ್ಧಿಸಿಲ್ಲ.

* ನಮ್ಮ ದೇಶದ ಜನಸಾಮಾನ್ಯರು ಅಶಿಕ್ಷಿತರಿರಬಹುದು, ಆದರೆ ನೋಟು ಅಮಾನ್ಯದ ನಿರ್ಧಾರವನ್ನು ಬೆಂಬಲಿಸಿದ್ದಾರೆ.

* ವಾಂಚೂ ಸಮಿತಿ ವರದಿ ಸಲ್ಲಿಸಿದಾಗ, ಖೋಟಾ ನೋಟುಗಳು ಭಯೋತ್ಪಾದಕರ ಹಣದ ಭಾಗವಾಗಿರಲಿಲ್ಲ.

* ಬಹಳ ಹಿಂದೆಯೇ ವಾಂಚೂ ಕಮಿಟಿ ನೋಟು ನಿಷೇಧಕ್ಕೆ ಶಿಫಾರಸು ಮಾಡಿತ್ತು. ಆದರೆ ಆ ಸಮಯದಲ್ಲಿ ಇಂದಿರಾಗಾಂಧಿ ಚುನಾವಣೆ ಎದುರಿಸುವ ಆತಂಕದಿಂದ ಅದನ್ನು ಜಾರಿಗೆ ತರಲಿಲ್ಲ ಎಂದು ಪ್ರಧಾನಿ ನುಡಿದರು.

* ಅಪ್ರಾಮಾಣಿಕರನ್ನು ಶಿಕ್ಷಿಸದೆ ಪ್ರಾಮಾಣಿಕ ಜನರ ಸಬಲೀಕರಣ ಸಾಧ್ಯವಿಲ್ಲ.

* ಭಯೋತ್ಪಾದಕರ ಕೈಯ್ಯಲ್ಲಿ 2,000 ರೂ ನೋಟುಗಳು ಪತ್ತೆಯಾಗಿವೆ ಎಂದು ಕೆಲವರು ಹೇಳುತ್ತಾರೆ. ಆದರೆ ನೋಟ್‌ ಬ್ಯಾನ್ ಬಳಿಕ ಬ್ಯಾಂಕುಗಳ ದರೋಡೆ ಪ್ರಯತ್ನಗಳು ನಡೆದಿವೆ ಎಂಬುದನ್ನು ನಾವು ಮರೆಯಬಾರದು.

* ಭ್ರಷ್ಟಾಚಾರವು ಬಡವರು ಮತ್ತು ಮಧ್ಯಮ ವರ್ಗದವರ ಆಶೋತ್ತರಗಳನ್ನುಮಣ್ಣುಪಾಲು ಮಾಡಿದೆ.

* ಹಿಂದೆಯೂ ಕೆಲವು ಪ್ರಯತ್ನಗಳಾಗಿದ್ದವು. ಆದರೆ ಇನ್ನಷ್ಟು ಸುಧಾರಣೆಗೆ ಅವಕಾಶಗಳಿವೆ. ಅಷ್ಟಕ್ಕೂ ಎಷ್ಟು ಕಾಲ ನಾವು ನಮ್ಮ ಸಮಸ್ಯೆಗಳನ್ನು ಹೊದಿಕೆಯಡಿ ಮುಚ್ಚಿಡಲು ಸಾಧ್ಯ?

* ಭ್ರಷ್ಟಾಚಾರದ ವಿರುದ್ಧ ಹೋರಾಟ ರಾಜಕೀಯ ಹೋರಾಟವಲ್ಲ. ಇದರಿಂದ ಯಾವ ಪಕ್ಷಕ್ಕೂ ರಾಜಕೀಯವಾಗಿ ತೊಂದರೆಯಾದೀತೆಂದು ಭಾವಿಸಲು ಸಾಧ್ಯವಿಲ್ಲ.

* ನಗದು ಹೆಚ್ಚಳದಿಂದ ಆರ್ಥಿಕವಾಗಿ ಹಲವು ದೋಷಗಳಿದ್ದರೂ ನಗದು ವ್ಯವಸ್ಥೆಯ ಅನುಕೂಲಗಳನ್ನು ಮಾತ್ರ ಏಕೆ ಹೇಳುತ್ತೀರಿ? 2012ರಲ್ಲಿ ನೀವೇ ಸಿದ್ಧಪಡಿಸಿದ ಶ್ವೇತಪತ್ರವೇ ಅದನ್ನು ಹೇಳಿದೆ.

ಈ ನಡುವೆ ಕಾಂಗ್ರೆಸ್ ಕೂಡ ಸಭಾ ತ್ಯಾಗ ಮಾಡಿ ಪ್ರತಿಭಟನೆ ಮಾಡಿತು ಎಂದು ತಿಳಿದು ಬಂದಿದೆ 


loading...

No comments