Breaking News

ಬಾಯಿಯ ದುರ್ಗಂಧ ಹೋಗಲಾಡಿಸುವ ಆಹಾರಗಳು


ಬಾಯಿಯ ಕೆಟ್ಟ ವಾಸನೆ ಮನುಷ್ಯನ ಆತ್ಮವಿಶ್ವಾಸವನ್ನೇ ಕುಂದಿಸುತ್ತೆ. ಹಲ್ಲಿನ ಸ್ವಾಸ್ಥ್ಯದೆಡೆಗಿನ ನಿರ್ಲಕ್ಷ್ಯ ಮತ್ತು ಜೀರ್ಣಕ್ರಿಯೆ ಸಮಸ್ಯೆ ಬಾಯಿಯ ದುರ್ವಾಸನೆ ತರುತ್ತದೆ. ಕೇವಲ ಹಲ್ಲುಜ್ಜುವ ಮೂಲಕ ಬಾಯಿಯನ್ನು ಶುದ್ಧವಾಗಿಟ್ಟುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನೈಸರ್ಗಿಕವಾಗಿ ಬಾಯಿಯ ದುರ್ನಾತ ಹೋಗಿಸುವ ಕೆಲವು ಆಹಾರಗಳು ಇಲ್ಲಿವೆ.
ಬಾಯಿಯ ದುರ್ಗಂಧ ಹೋಗಲಾಡಿಸುವ ಆಹಾರಗಳು:

* ವಿಟಮಿನ್ ಸಿ: 
ಸಿಟ್ರಸ್ ಹಣ್ಣುಗಳ ಸೇವನೆ ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ. ಈ ಹಣ್ಣುಗಳು ಬಾಯಿ ಮತ್ತು ಹಲ್ಲಿನಲ್ಲಿನ ಬ್ಯಾಕ್ಟೀರಿಯಾ ಕಡಿಮೆಮಾಡುತ್ತದೆ. ಇದರಿಂದ ವಸಡುಗಳಲ್ಲಿನ ಸಮಸ್ಯೆಯನ್ನೂ ತಡೆಯಬಹುದು. ಸ್ಟ್ರಾಬೆರಿ, ದ್ರಾಕ್ಷಿ, ನಿಂಬೆ, ಕಿತ್ತಳೆ ಈ ಹಣ್ಣುಗಳು ಮತ್ತು ಸೇಬು, ಕ್ಯಾರೆಟ್ ಇವುಗಳನ್ನೂ ಅಗಿದು ತಿಂದರೆ ಹಲ್ಲುಗಳು ಶುದ್ಧಗೊಳ್ಳುವುದಲ್ಲದೆ ದುರ್ವಾಸನೆಯೂ ಹೋಗುತ್ತದೆ.



* ನಿಂಬೆಹಣ್ಣು: ಊಟವಾದ ನಂತರ ನಿಂಬೆಹುಳಿ ಅಥವಾ ನಿಂಬೆಸಿಪ್ಪೆಯನ್ನು ಒಮ್ಮೆ ಉಜ್ಜಿಕೊಂಡರೆ ಹಲ್ಲುಗಳೂ ಚೆನ್ನಾಗಿರುತ್ತೆ, ದುರ್ವಾಸನೆಯೂ ಇರುವುದಿಲ್ಲ. ನಿಂಬೆ ಬಾಯಿಯಲ್ಲಿನ ಬ್ಯಾಕ್ಟೀರಿಯಾ ತೊಲಗಿಸುವುದಲ್ಲದೆ ಈರುಳ್ಳಿ, ಶುಂಠಿ ಬೆಳ್ಳುಳ್ಳಿಯ ವಾಸನೆಯನ್ನೂ ಬಾಯಿಯಿಂದ ಹೋಗಿಸುತ್ತದೆ.


* ಏಲಕ್ಕಿ, ಸೋಂಪು: ಏಲಕ್ಕಿ, ಲವಂಗ ಮತ್ತು ಸೋಂಪು ಕಾಳು ನೈಸರ್ಗಿಕವಾಗಿ ಬಾಯಿಯಿಂದ ದುರ್ಗಂಧವನ್ನು ಹೋಗಿಸುತ್ತದೆ. ಇದು ಬಾಯಿಯನ್ನು ರಿಫ್ರೆಷ್ ಮಾಡುತ್ತದೆ.


* ಸೀಬೆ ಎಲೆ: ಸೀಬೆ ಗಿಡದ ಎಲೆಯನ್ನು ಅಗಿದರೆ ಹಲ್ಲುಗಳು ಬೆಳ್ಳಗಾಗುತ್ತವೆ ಎನ್ನಲಾಗಿದೆ. ಇದು ಬಾಯಿ ದುರ್ಗಂಧವನ್ನೂ ತಡೆಯುತ್ತದೆ. ಕೊತ್ತಂಬರಿ ಮತ್ತು ಪುದೀನಾ ಎಲೆಯನ್ನೂ ಅಗಿಯಬಹುದು.


* ಮೊಸರು: ಸಂಶೋಧಕರ ಪ್ರಕಾರ, ಮೊಸರಿನ ಸೇವನೆಯಿಂದ ಬಾಯಿಯಲ್ಲಿ ದುರ್ವಾಸನೆಗೆ ಕಾರಣವಾಗುವ ಸಲ್ಫೈಟ್ ಕಡಿಮೆ ಮಾಡಬಹುದು. ಇದು ಬ್ಯಾಕ್ಟೀರಿಯಾವನ್ನು ತೊಲಗಿಸುವುದರಿಂದ ಕಡಿಮೆ ಕೊಬ್ಬಿನಂಶ, ಸಕ್ಕರೆರಹಿತ ಮೊಸರಿಸ ಸೇವನೆ ತುಂಬಾ ಒಳ್ಳೆಯದು. ಆದರೆ ಸಕ್ಕರೆ ಬೆರೆಸಿ ತಿಂದರೆ ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಇನ್ನಷ್ಟು ಹೆಚ್ಚುತ್ತದೆ.
-swayamvydya

loading...

No comments