Breaking News

ಮಾತಾ ಅಮೃತಾನಂದಮಯಿಯವರು ಫೆಬ್ರವರಿ 23ರಂದು ಮಂಗಳೂರಿಗೆ


ಮಂಗಳೂರು : ಮಾತಾ ಅಮೃತಾನಂದಮಯಿಯವರು ಫೆಬ್ರವರಿ 23ರಂದು ಮಂಗಳೂರಿಗೆ ಆಗಮಿಸಿ ಬೋಳೂರು ಅಮೃತ ವಿದ್ಯಾಲಯದ ವಠಾರದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಕ್ತರನ್ನು ಅನುಗ್ರಹಿಸಲಿದದ್ದಾರೆ. ಅಂದು ಬೆಳಿಗ್ಗೆ ಬ್ರಹ್ಮಸ್ಥಾನದಲ್ಲಿ ಮಹಾಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಸಂಜೆ ಭಗವತಿ ಸೇವೆ, ಮಹಾ ಸುದರ್ಶನ ಹೋಮ, ಅಲಂಕಾರ ಪೂಜೆ ನಡೆಯಲಿದೆ. ಈ ಪೂಜೆ ಸಲ್ಲಿಸದವರಿಗೆ ಅಮ್ಮನವರ ದಿವ್ಯ ಹಸ್ತದಿಂದ ಪ್ರಸಾದ ಸ್ವೀಕರಿಸುವ ಅವಕಾಶ ಇರುತ್ತದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸೇವಾ ಯೋಜನೆ ಆಯೋಜಿಸಲಾಗಿದ್ದು, ಭಿನ್ನಚೇತನರಿಗಾಗಿ ಗಾಲಿ ಕುರ್ಚಿ ವಿತರಣೆ, ಸ್ವಚ್ಛ ಭಾರತ ಅಭಿಯಾನದಂಗವಾಗಿ ಶಾಲೆಗಳಿಗೆ ಮೂರು ಬಣ್ಣಗಳ ಕಸದ ಬುಟ್ಟಿ ವಿತರಣೆ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ವಿದ್ಯಾರ್ಥಿ ವೇತನ, ಅಮೃತ ಶ್ರೀ ಮಹಿಳಾ ಸಬಲೀಕರಣ ಯೋಜನೆ, ಅರ್ಹ ಫಲಾನುಭವಿಗಳಿಗೆ ಪಿಂಚಣೆ ನೀಡಲಿದ್ದಾರೆ.
ಈ ಬಾರಿ ಅಮ್ಮನವರ ಕಾರ್ಯಕ್ರಮ ಒಂದೇ ದಿನ ಇರುತ್ತದೆ. ಆರು ಗಂಟೆಗೆ ಅಮ್ಮನವರು ವೇದಿಕೆಗೆ ಬಂದು ಭಜನೆ, ಪ್ರವಚನೆ, ಮಾನಸ ಪೂಜೆ, ಧ್ಯಾನವಿರುತ್ತದೆ. ಇದಾದ ಬಳಿಕ ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ತನ್ನ ಬಾಹುಗಳಲ್ಲಿ ಅಪ್ಪಿ ಅನುಗ್ರಹಿಸುವ ವಿಶೇಷ ದರ್ಶನವಿರುತ್ತದೆ. ಅಮ್ಮನವರ ಆರತಿಯ ನಂತರ ಸಭಾಂಗಣದಲ್ಲಿ ಆಸೀನರಾದವರಿಗೆ ಸ್ಥಳದಲ್ಲಿಯೇ ಬಂದು ಅಮ್ಮನ ಆಶ್ರಮವಾಸಿ ಬ್ರಹ್ಮಚಾರಿಗಳು ಪ್ರತಿಯೊಬ್ಬರಿಗೂ ಟೋಕನ್ ನೀಡುತ್ತಾರೆ. ಪುಟ್ಟ ಮಗುವಿಗೂ ಸಹಿತ ದರ್ಶನದ ಟೋಕನ್ ಕೇಳಿ ಪಡೆಯಬೇಕು. ಅಮ್ಮನ ದರ್ಶನ ಟೋಕನ್ ಪಡೆಯಲು ಯಾವುದೇ ಶುಲ್ಕವಿಲ್ಲ. ಯಾವುದೇ ಪಾಸ್ ಅಗತ್ಯ ಇಲ್ಲ. ಅಮ್ಮನವರ ಕಾರ್ಯಕ್ರಮದ ಮತ್ತಷ್ಟು ವಿವರಗಳು ಬೇಕಾದಲ್ಲಿ 0824-2457056, 8951470744 ಸಂಪರ್ಕಿಸಬಹುದು ಎಂದು ಮಾಧ್ಯಮ ಪ್ರಚಾರದ ಮುಖ್ಯಸ್ಥ ಮಾಧವ ಸುವರ್ಣ ತಿಳಿಸಿದ್ದಾರೆ.
loading...

No comments