ಯಡ್ಡಿಯೂರಪ್ಪ ಭೂಹಗರಣ ಸಂಬಂಧ: ಜುಲೈ 22ರಂದು ಸುಪ್ರೀಂ ಕೋರ್ಟ್ ಅಂತಿಮ ವಿಚಾರಣೆ
ನವದೆಹಲಿ : ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪ ಅವರ ವಿರುದ್ಧದ ಭೂಹಗರಣಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲು ಹಿಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನೀಡಿದ ಅನುಮತಿಯನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ನವೆಂಬರ್ 2015ರಲ್ಲಿ ನೀಡಿದ ಆದೇಶದ ವಿರುದ್ಧ ಸಿರಾಜಿನ್ ಬಾಷಾ ಎಂಬವರು ಮಾಡಿರುವ ಮೇಲ್ಮನವಿಯ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 22ಕ್ಕೆ ನಿಗದಿ ಪಡಿಸಿದೆ.
ವಿಚಾರಣಾ ನ್ಯಾಯಾಯದ ಮುಂದೆ ಈ ಸಂಬಂಧ ದಾಖಲಾಗಿರುವ ಖಾಸಗಿ ದೂರೊಂದರ ಮೇಲಿನ ವಿಚಾರಣೆಯನ್ನು ರದ್ದುಗೊಳಿಸುವಂತೆ ಯಡ್ಡಿಯೂರಪ್ಪ ಪರ ವಕೀಲ ಕೆ ವಿ ವಿಶ್ವನಾಥನ್ ಮನವಿ ಮಾಡಿದರೂ ಸದ್ಯ ಈ ಬಗ್ಗೆ ಆದೇಶವನ್ನು ಸದ್ಯ ನೀಡಲು ಜಸ್ಟಿಸ್ ಜೆ ಚೆಲಮೇಶ್ವರ್ ಹಾಗೂ ಎಸ್ ಅಬ್ದುಲ್ ನಝೀರ್ ಅವರನ್ನೊಳಗೊಂಡ ಪೀಠವು ನಿರಾಕರಿಸಿದೆ.
ಅದೇ ಸಮಯ ದೂರುದಾರ ಸಿರಾಜಿನ್ ಬಾಷಾ ಅವರ ವಕೀಲ ಗೋಪಾಲ್ ಸುಬ್ರಹ್ಮಣ್ಯಂ ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಗಿಸುವ ತನಕ ತಾನು ವಿಚಾರಣಾ ನ್ಯಾಯಾಲಯದಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗದೇ ಇರಲು ಒಪ್ಪಿಕೊಂಡರು. ಈ ಪ್ರಕರಣವನ್ನು ವಿಚಾರಣಾ ನ್ಯಾಯಾಲಯದಲ್ಲಿ ಮುಂದುವರಿಸಿಕೊಂಡು ಹೋಗಬಹುದೇ ಎಂದು ಅದು ಫೆಬ್ರವರಿ 22ರಂದು ನಡೆಯುವ ವಿಚಾರಣೆಯಲ್ಲಿ ಪರಿಗಣಿಸಲಿದೆ ಎಂದೂ ಹೇಳಿದ ಸುಬ್ರಹ್ಮಣ್ಯಂ, ಅದೇ ಸಂದರ್ಭ ಯಡ್ಡಿಯೂರಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಡಿಸೆಂಬರ್ 4,2015ರಂದು ರಾಜ್ಯಪಾಲ ವಜುಭಾಯಿ ವಾಲಾ ನಿರಾಕರಿಸಿರುವುದರ ವಿರುದ್ಧ ಹೈಕೋರ್ಟಿನ ಮುಂದೆ ಸಲ್ಲಿಸಲಾಗಿರುವ ಅಪೀಲನ್ನು ವರ್ಗಾಯಿಸಲು ಆದೇಶ ನೀಡಬೇಕೆಂದು ಕೋರಿದರು.
kale
loading...
No comments