Breaking News

ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಶ್ರೀಗುರು ಕೊಟ್ಟೂರೇಶ್ವರನ ತೇರು ಕುಸಿದು ಬಿದ್ದ ದುರ್ಘಟನೆಯ ದೃಷ್ಯ.

ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಶ್ರೀ ಕೊಟ್ಟೂರೇಶ್ವ ರಥೋತ್ಸವ ಸಂದರ್ಭದಲ್ಲಿ 60ಅಡಿ ಎತ್ತರದ ರಥ ಕುಸಿದು ಬಿದ್ದ ಪರಿಣಾಮ ಹಲವು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಜಾತ್ರಾ ಮಹೋತ್ಸವ ಪ್ರಯುಕ್ತ ಕೊಟ್ಟೂರೇಶ್ವರನ ರಥೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ರಥ ಎಳೆಯುತ್ತಿದ್ದ ಸಂದರ್ಭದಲ್ಲಿ ರಥದ ಗಾಲಿಯ ಅಚ್ಚು ಮುರಿದ ಪರಿಣಾಮ ಏಕಾಏಕಿ ರಥ ಕುಸಿದು ಬಿದ್ದಿದೆ. ರಥ ಎಳೆಯುತ್ತಿದ್ದ ಕೆಲವರು ರಥದ ಅಡಿಗೆ ಸಿಲುಕಿದ್ದು ತಕ್ಷಣ ಅವರನ್ನು ಕೊಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಥವನ್ನು ಕ್ರೇನ್ ಬಳಸಿ ಮೇಲೆತ್ತಲಾಗಿದೆ.

ದುರ್ಘಟನೆಯ ವೀಡಿಯೋ : 
loading...

No comments