ದೇವರೂ ಮೆಚ್ಚುವಂಥ ಪ್ರೀತಿ ಎಂಟು ವರ್ಷದ ಪ್ರೀತಿ, ಕ್ಯಾನ್ಸರ್ಗೂ ಹೆದರಲಿಲ್ಲ
ದೇವರಂತಾ ಗಂಡ ಸಿಗಲಿ ಅನ್ನೋದು ಪ್ರತಿ ಹೆಣ್ಣು ಮಕ್ಕಳ ಕನಸು. ಅದು ಸುಮಾರು ಹುಡುಗಿಯರ ಬಾಳಲ್ಲಿ ನನಸಾಗೋದಿಲ್ಲ. ಆದರೆ, ಈ ಪ್ರೇಮಕಥೆ ಹಾಗಲ್ಲ. ಈ ಲವ್ ಸ್ಟೋರಿ ನೋಡಿದ್ರೆ, ಪ್ರತಿಯೊಬ್ಬ ಹುಡುಗಿ ಕೂಡಾ ಇಂಥ ಹುಡುಗ ನನಗೂ ಸಿಗಲಿ ಅಂಥಾ ಬಯಸ್ತಾಳೆ.
ಇದು ವಿಷ್ಣು ಮತ್ತು ಲಕ್ಷ್ಮಿ ಅನ್ನೋವ್ರ ಪ್ರೇಮಕಥೆ. ಇಬ್ಬರೂ ಬೆಳಗಾವಿಯ ಶಿವಾಜಿ ನಗರದವರು. ಇವರಿಬ್ಬರೂ 8 ವರ್ಷ ಒಬ್ಬರನ್ನೊಬ್ಬರು ಪ್ರೀತಿಸಿದ್ದರು. ಹಾಗೆ ಪ್ರೀತಿಸುತ್ತಿದ್ದಾಗಲೇ, ಲಕ್ಷ್ಮಿಗೆ ಕ್ಯಾನ್ಸರ್ ಅನ್ನೋ ವಿಷಯ ಗೊತ್ತಾಯ್ತು.
ಅಪ್ಪ-ಅಮ್ಮನಿಗೆ ವಿಷ್ಣು ಒಬ್ಬನೇ ಮಗ. ತನ್ನಿಂದ ಅವನ ಬದುಕು ಹಾಳಾಗಬಾರದು ಅಂಥಾ ಲಕ್ಷ್ಮಿ, ವಿಷ್ಣುವನ್ನು ನಿರ್ಲಕ್ಷಿಸಲು ಶುರು ಮಾಡಿದ್ರು. ಹೇಗೋ ಲಕ್ಷ್ಮಿಗೆ ಬ್ಲಡ್ ಕ್ಯಾನ್ಸರ್ ಇದೆ ಅನ್ನೋ ವಿಷಯವನ್ನ ತಿಳಿದುಕೊಂಡ ವಿಷ್ಣು, ಅದಕ್ಕಾಗಿಯೇ ಆಕೆ ತನ್ನಿಂದ ದೂರ ಹೋಗ್ತಿದಾಳೆ ಅನ್ನೋದನ್ನು ಅರ್ಥ ಮಾಡಿಕೊಂಡ. ನಂತರ, ಲಕ್ಷ್ಮಿಗೆ ಬೆನ್ನುಬಿದ್ದ. ಕ್ಯಾನ್ಸರ್ ಬಂದಿರೋದು ನಿನಗೆ, ಪ್ರೀತಿಗಲ್ಲ ಎಂದ ವಿಷ್ಣು, ಮನೆಯವರನ್ನೆಲ್ಲ ಒಪ್ಪಿಸಿ ಲಕ್ಷ್ಮಿಯನ್ನು ಮದುವೆಯಾದ. ಇದರಲ್ಲಿ ಇನ್ನೂ ಒಂದು ವಿಶೇಷ ಏನಂದರೆ, ಇವರಿಬ್ಬರದ್ದು ಅಂತರ್ಜಾತಿ ವಿವಾಹ.
ಪ್ರೀತಿಯೇನೋ ಇದೆ. ಆದರೆ, ಬದುಕಿರುವಷ್ಟು ದಿನ ಲಕ್ಷ್ಮಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೋರಾಡುತ್ತಿರುವ ವಿಷ್ಣುಗೆ, ತನ್ನ ಸಂಪೂರ್ಣ ದುಡಿಮೆಯನ್ನೆಲ್ಲ ಹಾಕಿದರೂ, ಲಕ್ಷ್ಮಿಯ ಚಿಕಿತ್ಸೆಗೆ ದುಡ್ಡು ಹೊಂದಿಸೋಕೆ ಆಗ್ತಾ ಇಲ್ಲ. ನೆರವು ಒದಗಿಸುವವರು ವಿಷ್ಣು ಅವರನ್ನು ಈ ಸಂಖ್ಯೆಯಲ್ಲಿ 8970055006 ಸಂಪರ್ಕಿಸಬಹುದು. ಅವರ ಖಾತೆ ವಿವರ:
Vishnu Shivaling Ingali
Account Number 64170279728
IFSC SBMY0040209
State Bank of Mysore
Branch Belagavi
-via suvarana news
loading...
No comments