Breaking News

ಶೋಕಿರಾಜ ಮಲ್ಯ ಗಡಿಪಾರಿಗೆ ಕ್ಷಣ ಗಣನೆ ?


ನವದೆಹಲಿ : ಬ್ಯಾಂಕುಗಳಿಗೆ ಸಾವಿರಾರು ಕೋಟಿ ಗಟ್ಟಲೆ ಸಾಲ ಮರು ಪಾವತಿಸದೇ ಲಂಡನ್’ಗೆ ಪರಾರಿಯಾಗಿ  ನೆಲಸಿರುವ ಉದ್ಯಮಿ ವಿಜಯ್ ಮಲ್ಯ ಗಡಿಪಾರು ವಿಚಾರದಲ್ಲಿ ಭಾರತವು ಮಾಡಿರುವ ಮನವಿಗೆ ಬ್ರಿಟನ್ ಧನಾತ್ಮಕವಾಗಿ ಸ್ಪಂದಿಸಿದೆಯೆಂದು ವರದಿಯಾಗಿದೆ.

ಕಳೆದ ಸೋಮವಾರ ಕೇಂದ್ರ ಗೃಹ ಇಲಾಖೆಯು ವಿಜಯ್ ಮಲ್ಯ ಗಡಿಪಾರಿಗೆ ಸಂಬಂಧಿಸಿದ ಕೋರ್ಟ್ ಮನವಿಯನ್ನು ವಿದೇಶಾಂಗ ವ್ಯವಹಾರ ಇಲಾಖೆಗೆ ರವಾನಿಸಿದೆ.
ಭಾರತ- ಬ್ರಿಟನ್ ಪರಸ್ಪರ ಕಾನೂನು ನೆರವು ಒಪ್ಪಂದ (MLAT)ಯ ಆಧಾರದಲ್ಲಿ ಮಲ್ಯರನ್ನು ಭಾರತಕ್ಕೆ ವಾಪಾಸು ಕರೆ ತರಲು ಜಾರಿ ನಿರ್ದೇಶನಾಲಯವು (ಇ.ಡಿ) ಮಾಡಿರುವ ಮನವಿಗೆ ಮುಂಬೈ ವಿಶೇಷ ನ್ಯಾಯಾಲಯವು ಸಮ್ಮತಿಸಿದ್ದು, ಆ ವಿವರಗಳನ್ನು ಗೃಹ ಇಲಾಖೆಯು ವಿದೇಶಾಂಗ ಇಲಾಖೆಗೆ ಒದಗಿಸಿದೆ. ಆ ದಾಖಲೆಗಳನ್ನು ವಿದೇಶಾಂಗ ಇಲಾಖೆಯು ಬ್ರಿಟನ್ ಸರ್ಕಾರಕ್ಕೆ ಸಲ್ಲಿಸಿದೆ.
loading...

No comments