Breaking News

ಪೂಜೆಗಾಗಿ ತಾಯಿಯನ್ನೇ ಬಲಿ ನೀಡಿದ ಪಾಪಿ ಮಗ.

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿಗೊಲ್ಲರ ಹಟ್ಟಿಯಲ್ಲಿ ಭೀಕರ ಹತ್ಯೆ ನಡೆದಿದೆ. ಪೂಜೆಗಾಗಿ ಬಲಿ ನೀಡಲು ಹೆತ್ತ ತಾಯಿಯನ್ನೇ ಮಗನೊಬ್ಬ ಕೊಚ್ಚಿ ಕೊಂದಿದ್ದಾನೆ. ಘಟನೆ ಮಂಗಳವಾರ ರಾತ್ರಿ 9ಗಂಟೆ ಸುಮಾರಿಗೆ ನಡೆದಿದೆ.
ತಿಮ್ಮರಾಜು ಎಂಬಾತನೆ ತಾಯಿಯನ್ನೇ ಹತ್ಯೆಗೈದ ವ್ಯಕ್ತಿ, ಮಗನ ಮಚ್ಚಿನೇಟಿಗೆ ತಾಯಿ ಸಾವಿತ್ರಮ್ಮ ಸ್ಥಳದಲ್ಲಿಯೇ ಅಸುನೀಗಿದರು. ಎರಡು ವರ್ಷದ ಹಿಂದೆ ಈತನ ಹೆಂಡತಿ ಮನೆ ತೊರೆದಿದ್ದಳು, ಇದರಿಂದ ನೊಂದ ತಿಮ್ಮರಾಜು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಪ್ರತಿದಿನ ತಾಯಿಯೊಂದಿಗೆ ಜಗಳವಾಡುತ್ತಿದ್ದ.
ಪೋಲೀಸರ ವಿಚಾರಣೆ ವೇಳೆ ಆತ 'ಮೈಮೇಲೆ ದೇವರು ಬಂದು ತಾಯಿಯನ್ನು ಕೊಲೆಮಾಡಲು ಹೇಳಿತು, ಹಾಗಾಗಿ ಕೊಂದು ಹಾಕಿದ್ದಾಗಿ' ಹೇಳಿದ್ದಾನೆ.ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿ ತನಿಖೆ ನಡೆಸುತ್ತಿದ್ದಾರೆ.
loading...

No comments