ಉಡುಪಿ ನೂತನ ಜಿಲ್ಲಾಧಿಕಾರಿಯಾಗಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್
ಉಡುಪಿ : ಜಿಲ್ಲಾಧಿಕಾರಿಯಾಗಿದ್ದ ಟಿ ವೆಂಕಟೇಶರನ್ನು ವರ್ಗಾವಣೆ ಮಾಡಿರುವ ಹಿನ್ನಲೆಯಲ್ಲಿ ನೂತನ ಜಿಲ್ಲಾಧಿಕಾರಿಯನ್ನಾಗಿ ಜಿಲ್ಲಾ ಪಂಚಾಯತ್ ಸಿಇಓ ಪ್ರಿಯಾಂಕಾ ಮೇರಿ ಅವರನ್ನು ಸರಕಾರ ನಿಯುಕ್ತಿ ಮಾಡಿದೆ. ಫೆ 21ರಂದು ವರ್ಗಾವಣೆ ಆದೇಶ ರಾಜ್ಯ ಸರಕಾರದಿಂದ ಬಂದಿದೆ.
ಸರ್ಕಾರದ ಸುತ್ತೋಲೆಯಂತೆ ಜಿಲ್ಲಾಧಿಕಾರಿ ಟಿ ವೆಂಕಟೇಶರನ್ನು ಸರ್ಕಾರದ ಅಧೀನದಲ್ಲಿರುವ ಮೈಸೂರು ಶುಗರ್ ಲಿಮಿಟೆಡ್ ಬೆಂಗಳೂರು ಈ ಕಂಪೆನಿಗೆ ಆಡಳಿತ ನಿರ್ದೇಶಕರನ್ನಾಗಿ (ಎಂಡಿ) ವರ್ಗಾವಣೆ ಮಾಡಿದರೆ, ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿದೆ. ಇವರ ಜೊತೆಗೆ ಸುಮಾರು 11 ಮಂದಿ ಅಧಿಕಾರಿಗಳನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
2009ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಪ್ರಿಯಾಂಕಾ ಪ್ರಾನ್ಸಿಸ್ ನವೆಂಬರ್ 2015ರಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ನೇಮಕಗೊಂಡಿದ್ದರು. ಈ ಹಿಂದಿನ ನಿರ್ಗಮನ ಡೀಸಿ ಆರ್ ವಿಶಾಲ್ ವರ್ಗಾವಣೆಯಾಗಿದ್ದ ಸಂದರ್ಭದಲ್ಲೂ ಇವರಿಗೆ ಪ್ರಭಾರ ಜಿಲ್ಲಾಧಿಕಾರಿ ಹುದ್ದೆ ನೀಡಲಾಗಿತ್ತು.
k-ale
loading...
No comments