Breaking News

ಗೋ ಕಳ್ಳಸಾಗಾಣಿಕೆ ಗಾರರ ಬಂಧನ


ಸುಳ್ಯ : ಅಕ್ರಮ ದನ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ ಸಾರ್ವಜನಿಕರು ಅದನ್ನು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ನೆಲ್ಲೂರು ಕೆಮ್ರಾಜೆಯಿಂದ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿತ್ತು.

ಎರಡು ಜಾನುವಾರುಗಳಿಗಷ್ಟೇ ಪರವಾನಿಗೆ ಪಡೆದುಕೊಂಡಿದ್ದರೆ, ಇನ್ನೆರಡು ಜಾನುವಾರುಗಳನ್ನು ಅಕ್ರಮವಾಗಿ ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಸೋಣಂಗೇರಿ ಮತ್ತು ಜಾಲ್ಸೂರಿನ ಪರಿವಾರ ಸಂಘಟನೆ ಕಾರ್ಯಕರ್ತರು ತಡೆದು ನಿಲ್ಲಿಸಿ ಸುಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಿಜು, ಸೋಮಶೇಖರ, ಜೈಮೋನ್, ಸಲ್ಮಾನ್ ಎಂದು ಗುರುತಿಸಲಾಗಿದೆ. ಇವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

loading...

No comments