"ಕೇಸರಿ ಧ್ವಜಕ್ಕೆ ಬೆಂಕಿ" ಕಿಡಿಗೇಡಿಗಳಿಗೆ ಕಠಿಣ ಶಿಕ್ಷಯಾಗಬೇಕು ಎಂದು ಆಗ್ರಹಿಸಿದ ಮುಸ್ಲಿಂ ಮುಖಂಡರು
ಪ್ರಸ್ತುತ ನಡೆದಿರುವ ವಿಧ್ವಂಸಕ ಕೃತ್ಯಕ್ಕೆ ಕ್ಷಮೆಯಾಚಿಸಿದ ಮುಸ್ಲಿಂ ಮುಖಂಡರು
ತಿಪಟೂರು:ಸಮಾಜದಲ್ಲಿ ಹಿಂದೂ-ಮುಸ್ಲಿಂಮರು ಒಂದೇ ಕುಟುಂಬದಂತಿದ್ದು ಕೆಲಸಂದರ್ಭಗಳಲ್ಲಿ ಕೆಲ ಕಿಡಿಗೇಡಿಗಳು ಶಾಂತಿ ಕದಡುವ ಸಲುವಾಗಿ ಪ್ರಚೋದನಕಾರಿ ಕೃತ್ಯಗಳನ್ನು ಎಸಗಲು ಮುಂದಾಗುತ್ತಾರೆ. ಅಂತಹ ಕಿಡಿಗೇಡಿಗಳಿಗೆ ಕಠಿಣ ಶಿಕ್ಷಯಾಗುಬೇಕು ಎಂದು ಮದೀನಾ ಮಸೀದಿಯ ಮುತುವಲ್ಲಿ ಮಹಮದ್ ದಸ್ತಗಿರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ನಡೆದ ಶ್ರೀಗುರುಸಪ್ತಾಹ ಹಾಗೂ ಬೆಳ್ಳಿ ರಥ ಲೋಕಾರ್ಪಣೆಯ ಅಂಗವಾಗಿ ರಸ್ತೆಯ ಎರಡೂ ಬದಿಗಳಲ್ಲಿ ಕೇಸರಿ ಧ್ವಜಗಳನ್ನು ಕಟ್ಟಲಾಗಿತ್ತು. ಈ ವೇಳೆಯಲ್ಲಿ ಕೆಲ ಮುಸ್ಲಿಂ ಸಮುದಾಯದ ಕಿಡಿಗೇಡಿಗಳಾದ ಯಾಸೀನ್, ಆಸೀಫ್, ಸುೀಲ್, ರೋಷನ್, ಕಲೀಲ್ ಎಂಬ ಐವರು ಕೇಸರಿ ಧ್ವಜಕ್ಕೆ ಬೆಂಕಿ ಹಚ್ಚಿ ಸಾಮಾಜಿಕ ಜಾಲ ತಾಣಗಳ ಮುಖಾಂತರ ಇತರರಿಗೆ ಕಳುಸಿ ಸಮಾಜದ ಶಾಂತಿಯನ್ನು ಕದಡುವ ಕೆಲಸಕ್ಕೆ ಕೈಹಾಕಿದ್ದಾರೆ. ಇಂತಹವರಿಗೆ ಶಿಕ್ಷೆ ನೀಡುವ ದೃಷ್ಟಿಯಿಂದ ಮುಸ್ಲಿಂ ಮುಖಂಡರುಗಳೇ ಖುದ್ದಾಗಿ ಅವರನ್ನು ಪೊಲಿಸರಿಗೆ ಡಿದುಕೊಟ್ಟಿರುವುದಾಗಿ ತಿಳಿಸಿದರು.
ಅಲ್ಲದೇ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ವಿದ್ವಂಸಕ ಕೃತ್ಯಗಳು ನಡೆಯದಂತೆ ನಾವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತೇವೆ. ಪ್ರಸ್ತುತ ನಡೆದಿರುವ ವಿಧ್ವಂಸಕ ಕೃತ್ಯಕ್ಕೆ ಹಿಂದೂ ಸಮಾಜದ ಎಲ್ಲರನ್ನು ಹಾಗೂ ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ಶ್ರೀಗಳ ಕ್ಷಮೆಯಾಚಿಸುವುದಾಗಿ ತಿಳಿಸಿದರು
ಬಿಲಾಲ್ ಮಸೀದಿಯ ಮುತುವಲ್ಲಿ ಷಫೀ ಉಲ್ಲಾ ಷರೀಫ್, ಸೈಯದ್ ಮಹಮದ್ ಸಾಬ್, ಮಜೂರ್ ಸಾಬ್, ಗೌರ್ ಫೀರ್, ನಗರಸಭೆ ಸದಸ್ಯ ರೋಷನ್ ಖಾನ್, ಮಾಜಿ ನಗರಸಭಾ ಸದಸ್ಯ ನಾಸೀರ್ ಸಾಬ್, ನಸರತ್ ಉಲ್ಲಾ, ಮಹಮದ್ ಜುಬೇರ್ ಮತ್ತಿತರರು ಉಪಸ್ಥಿತರಿದ್ದರು.
-ee sanje
ಕೇಸರಿ ದ್ವಜಕ್ಕೆ ಬೆಂಕಿ ಹಚ್ಚುತಿರುವ ಕಿಡಿಗೇಡಿ
loading...
No comments