Breaking News

ಅಳಿಯನ ರಕ್ಷಣೆಗಾಗಿ ಕೃಷ್ಣ ರಾಜೀನಾಮೆ: ಹಿರೇಮಠ ಆರೋಪ


ಹುಬ್ಬಳ್ಳಿ: ''ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಬೆಲೆಬಾಳುವ ಸುಮಾರು 180 ಎಕರೆ ಅರಣ್ಯ ಭೂಮಿಯನ್ನು ವಿ.ಜಿ.ಸಿದ್ದಾರ್ಥ ಕಬಳಿಸಿದ್ದರ ವಿರುದ್ಧ ಹೈಕೋರ್ಟ್‌ಗೆ ಸಮಾಜ ಪರಿವರ್ತನಾ ಸಮುದಾಯ ಅರ್ಜಿ ದಾಖಲಿಸಲಿದೆ'' ಎಂದು ಸಮಾಜ ಪರಿವರ್ತನಾ ಸಂಸ್ಥೆ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ''ಸಾಕಷ್ಟು ಪತ್ರ ವ್ಯವಹಾರ ಮಾಡಿದರೂ ಅರಣ್ಯ ಇಲಾಖೆ ಇವರ ಮೇಲೆ ಅರಣ್ಯ ಕಾಯ್ದೆ ಉಲ್ಲಂಘನೆ ಅಡಿ ಕೇಸು ದಾಖಲು ಮಾಡದಿರುವುದು, ಸರಕಾರಿ ಅಧಿಕಾರಿಗಳು ಮತ್ತು ಅವರ ನಡುವೆ ಅಪಪವಿತ್ರ ಮೈತ್ರಿ, ನಂಟಸ್ಥಿಕೆ ಇರಬಹುದೆಂಬ ಸಂಶಯ ವ್ಯಕ್ತವಾಗುತ್ತದೆ'' ಎಂದರು.
''ಕಾಳಧನ ಸಂಗ್ರಹಣೆಯಲ್ಲಿ ವಿ.ಜಿ.ಸಿದ್ದಾರ್ಥ ಪಾಲ್ಗೊಂಡಿದ್ದಾರೆ. ಕಾನೂನು ಬಾಹಿರ ಆಸ್ತಿ ಹೊಂದಿದ್ದಾರೆ. ಸೂಕ್ತ ತನಿಖೆಗೆ ಸುಪ್ರಿಂಕೋರ್ಟ್‌ ರಚಿಸಿದ ವಿಶೇಷ ತನಿಖಾ ದಳಕ್ಕೆ ಸಪಸ ಮೊರೆ ಹೋಗಿದೆ. ಸಿದ್ಧಾರ್ಥಗೆ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್‌.ಎಂ.ಕೃಷ್ಣ ಸಹಾಯಹಸ್ತ ಚಾಚಿರುವುದು ಮೇಲ್ಮೋಟಕ್ಕೆ ಕಂಡುಬರುತ್ತದೆ. ಈ ಕುರಿತು ಸಿಬಿಐ ಎನ್‌ಪೋರ್ಸ್‌ಮೆಂಟ್‌ ಡೈರಕ್ಟರ್‌ ತನಿಖೆಯಾಗುವಂತೆ ಕೇಳಿಕೊಳ್ಳಲಾಗಿದೆ'' ಎಂದರು.
''ಎಸ್‌.ಎಂ.ಕೃಷ್ಣ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಕೊಟ್ಟಿರುವುದು ಅಳಿಯ ವಿ.ಜಿ.ಸಿದ್ದಾರ್ಥಗೆ ಅಕ್ರಮ ಆಸ್ತಿ ಗಳಿಸಿದ್ದನ್ನು ಸಂರಕ್ಷಿಸುವ ಹುನ್ನಾರ ಹಾಗೂ ತಾವು ಮಾಡಿದ ಕಾನೂನು ಬಾಹೀರ, ತಪ್ಪು ಮುಚ್ಚಿ ಹಾಕಿಕೊಳ್ಳುವ ಭಾಗವಾಗಿದೆ. ಇಳಿ ವಯಸ್ಸಿನಲ್ಲಿ ಕೃಷ್ಣ ಅವರು ತುಂಬಾ ಚಾಣಾಕ್ಷತನದಿಂದ ಹೆಜ್ಜೆ ಇಡುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ'' ಎಂದು ಆರೋಪಿಸಿದ್ದಾರೆ.
-vijayakaranataka


loading...

No comments