Breaking News

ಜರ್ಮನ್ ನಿಯತಕಾಲಿಕ ಪ್ರಕಟಿಸಿದ ಡೊನಾಲ್ಡ್ ಟ್ರಂಪ್ ಅವರ ಕಾರ್ಟೂನ್ ಇದೀಗ ವಿವಾದ ಸ್ರಷ್ಟಿಸಿದೆ


ಬರ್ಲಿನ್: ಅಮೆರಿಕದ ಸ್ವಾತಂತ್ರ್ಯದ ಪ್ರತಿಮೆ 'ಸ್ಟಾಚ್ಯೂ ಆಫ್ ಲಿಬರ್ಟಿ'ಯ ತಲೆ ಕಡಿದು ಕೈಯಲ್ಲಿ ಹಿಡಿದು ನಿಂತಿರುವ ರೀತಿಯಲ್ಲಿ ಅಮೆರಿಕದ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಟೂನ್ ಪ್ರಕಟಿಸಿ ಜರ್ಮನ್ ನಿಯತಕಾಲಿಕ ವಿವಾದ ಸೃಷ್ಟಿಸಿದೆ.

ಜರ್ಮನಿಯ ಡೆರ್ ಸ್ಪೀಗಲ್ ಎಂಬ ನಿಯತಕಾಲಿಕದಲ್ಲಿ ಈ ಕಾರ್ಟೂನ್ ಪ್ರಕಟವಾಗಿದೆ.

'ಅಮೆರಿಕ ಮೊದಲು' ಎಂಬ ಟ್ರಂಪ್ ನೀತಿಯನ್ನೇ ಈ ಕಾರ್ಟೂನ್‍‍ಗೆ ತಲೆಬರಹವಾಗಿ ನೀಡಲಾಗಿದೆ.

1980ರಲ್ಲಿ ಕ್ಯೂಬಾ ವಲಸೆಗಾರನಾಗಿ ಅಮೆರಿಕಕ್ಕೆ ಬಂದಿದ್ದ ಎಡಲ್ ರೋಡ್ಗಿಗಸ್ ಎಂಬ ಕಲಾವಿದ ಈ ಕಾರ್ಟೂನ್ ರಚಿಸಿದ್ದಾರೆ. ಪ್ರಸ್ತುತ ಕಾರ್ಟೂನ್‍ಗೆ ಜರ್ಮನಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

loading...

No comments