ಎಚ್ಡೀಕೆ ಗೂಳಿಯಂತೆ : ಧನಂಜಯ್
ಬೆಂಗಳೂರು : ಇನ್ನು ಕೇವಲ ಏಳೆಂಟು ತಿಂಗಳಷ್ಟೇ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವುದು ಎಂದು ಹೇಳಿರುವ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷ ಧನಂಜಯ್ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿ ಅವರು ಲಂಳಗುಲಗಾಮಿಲ್ಲದ ಗೂಳಿ ಇದ್ದಂತೆ ಎಂದು ಹೋಲಿಕೆ ನೀಡಿದ್ದಾರೆ. ಈ ಗೂಳಿಯನ್ನು ಹೇಗೆ ಪಳಗಿಸಬೇಕೆಂದು ಕಾಂಗ್ರೆಸ್‍ಗೆ ಚೆನ್ನಾಗಿ ಗೊತ್ತಿದೆ. ಅವರ ಹೇಳಿಕೆಗಳು ಆಧಾರರಹಿತ ಎಂದು ಹೇಳಿದ್ದಾರೆ.
“ಜೆಡಿಎಸ್ ಪಕ್ಷ ಈಗಾಗಲೇ ಒಡೆದು ಇಬ್ಬಾಗವಾಗುತ್ತಿದೆ. ಮೊದಲು ಅವರು ತಮ್ಮ ಪಕ್ಷವನ್ನು ನೋಡಿಕೊಳ್ಳಲಿ. ಅವರದ್ದೇ ಪಕ್ಷದ ಎಂಎಲ್ಸಿಯೊಬ್ಬರು ಮಾಜಿ ಮುಖ್ಯಮಂತ್ರಿಯೊಬ್ಬರಿಂದ ಹಣ ಪಡೆದುಕೊಂಡು ಇದೀಗ ಬಿಜೆಪಿ ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಧನಂಜಯ್ ಟೀಕಿಸಿದ್ದಾರೆ.
-k ale
loading...
No comments