Breaking News

ಮಂಡಿ ನೋವಿಗೆ ಚಿಕಿತ್ಸೆ ಇಲ್ಲಿದೆ ನೋಡಿ



ಅಧಿಕವಾದ ಮಂಡಿ ಮತ್ತು ಪೃಷ್ಟದ ನೋವು ನಿಮ್ಮ ದೈನಂದಿನ ಜೀವನಕ್ಕೆ ಅಡ್ಡಿಯನ್ನು ಉಂಟು ಮಾಡುತ್ತಿದ್ದರೆ, ಪೂರ್ಣ ಮಂಡಿ ಮರುಜೋಡಣೆಯ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯಾಗಿದ್ದು, ಇದು ಮಂಡಿಯ ಕೀಲುಗಳ ಗಾಯಗೊಂಡ ಅಥವಾ ಹಾನಿಗೊಳಗಾದ ಭಾಗವನ್ನು ಕೃತಕ ಭಾಗಗಳಿಂದ ಮರುಜೋಡಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಮಂಡಿಯ ಸುತ್ತಲಿನ ಸ್ನಾಯುಗಳು ಮತ್ತು ಅಸ್ಥಿಮಜ್ಜೆಯನ್ನು ಪ್ರತ್ಯೇಕಿಸುವ ಮೂಲಕ (ಮಂಡಿಯ ಕೀಲುಗಳನ್ನು ಆವರಿಸಿರುವ ಬಿರುಸಾದ, ಬಾಗಿದ ಮೂಳೆಯಂತಹ ಅಂಗಾಂಶ) ನಡೆಸಲಾಗುತ್ತದೆ. ಕವಚವನ್ನು ತೆರೆದು, ಕೀಲಿನ ಒಳಭಾಗವನ್ನು ಹೊರಗೆ ಕಾಣಿಸುವಂತೆ ಮಾಡಲಾಗುತ್ತದೆ. ತೊಡೆಯ ಮೂಳೆಯ ಕೊನೆ (ಫೆಮುರ್) ಮತ್ತು ಮೊಣಕಾಲಿನ ಎಲುಬುಗಳನ್ನು (ಟಿಬಿಯಾ) ತೆಗೆಯಲಾಗುತ್ತದೆ. ಕೃತಕ ಭಾಗಗಳನ್ನು ಅದೇ ಸ್ಥಳದಲ್ಲಿ ಅಂಟಿಸಲಾಗುತ್ತದೆ. ನಿಮ್ಮ ಹೊಸ ಮಂಡಿಯು ಫೆಮುರ್‌ನ ಕೊನೆಯಲ್ಲಿ ಒಂದು ಲೋಹದ ಕವಚ, ಟಿಬಿಯಾದ ಮೇಲೆ ಒಂದು ಲೋಹ ಹಾಗೂ ಪ್ಲಾಸ್ಟಿಕ್‌ನ ಬಾಗಿದ ಸಾಧನವನ್ನು ಹೊಂದಿರುತ್ತದೆ ಹಾಗೂ ಅಗತ್ಯವಿದ್ದಲ್ಲಿ, ಮಂಡಿಯ ಚಿಪ್ಪಿನ ಮೇಲೆ ಪ್ಲಾಸ್ಟಿಕ್ ಬಟನ್ ಇರುತ್ತದೆ.
ಪೂರ್ಣ ಮಂಡಿ ಮರುಜೋಡಣೆಯನ್ನು ಸಾಮಾನ್ಯವಾಗಿ ತೀವ್ರ ಅರ್ಥ್ರೈಟಿಸ್ ಸ್ಥಿತಿಯಿಂದ ಬಳಲುವ ವ್ಯಕ್ತಿಗಳಿಗೆ ಮಾಡಲಾಗುತ್ತದೆ. ಈ ಪರಿಸ್ಥಿತಿಯು ಕೆಲವೊಮ್ಮೆ ಭಿನ್ನವಾಗಿರುತ್ತದೆ.
* ನಿಮಗೆ ದಿನವೂ ನೋವಿದ್ದರೆ,
* ನಿಮ್ಮ ನೋವು ನಿಮಗೆ ಕೆಲಸ ಮಾಡಲು ಮತ್ತು ವಿಹಾರಗಳನ್ನು ನಿರ್ಬಂಧಿಸುವಷ್ಟು ತೀವ್ರವಾಗಿರುವುದು ಮಾತ್ರವಲ್ಲದೆ ನಿಮ್ಮ ದೈನಂದಿನ ಜೀವನದ ಚಟುವಟಿಕೆಗಳನ್ನು ನಿರ್ಬಂಧಿಸಿದಲ್ಲಿ,
* ನಿಮ್ಮ ಮಂಡಿಯಲ್ಲಿ ನಿರಂತರವಾದ ವಿರುಸುತನ ಕಂಡುಬಂದರೆ,
* ನಿಮ್ಮ ಮಂಡಿಯು ಹೆಚ್ಚು ಅಸ್ಥಿರವಾಗಿದ್ದಲ್ಲಿ (ನಿರಂತರವಾಗಿ ಅಡ್ಡಿ),
* ನಿಮಗೆ ಹೆಚ್ಚು ನ್ಯೂನತೆಯಿದ್ದಲ್ಲಿ (ಒಂದಕ್ಕೊಂದು ತಗುಲುವ ಮಂಡಿ ಅಥವಾ ಬಾಗಿದ ಮಂಡಿ).
ಕೃತಕ ಮಂಡಿಯಿಂದಾಗುವ ಅನುಕೂಲ
ಕೃತಕ ಮಂಡಿಯ ಶಸ್ತ್ರಚಿಕಿತ್ಸೆಯು ನೋವಿನಿಂದ ಮುಕ್ತಿ ನೀಡುತ್ತದೆ. ಮಂಡಿಯ ಮರುಜೋಡಣೆಯು ನಿಮಗೆ ನೋವಿನಿಂದ ಮುಕ್ತಿ ನೀಡುವುದರಿಂದ ನೀವು ನಿಮ್ಮ ದೈನಂದಿನ ಜೀವನದ ಅನೇಕ ಸಾಮಾನ್ಯ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಕೃತಕ ಮಂಡಿಯು ಶಸ್ತ್ರಚಿಕಿತ್ಸಕರ ಕೆಲವು ಸೂಚನೆಗಳ ಮೇರೆಗೆ ನಿಮ್ಮನ್ನು ಸಕ್ರಿಯ ಕ್ರೀಡೆ ಮತ್ತು ದೈನಂದಿನ ಚಟುವಟಿಕಗಳಿಗೆ ಮರಳಲು ನೆರವಾಗುತ್ತದೆ. ಕೃತಕ ಮಂಡಿಯ ಮೇಲೆ ಅಧಿಕ ಭಾರ ನೀಡುವ ಕೆಲವು ಚಟುವಟಿಕೆಗಳನ್ನು ನೀವು ನಿಲ್ಲಿಸಬೇಕು.
ಸಲಹೆ
* ನೀವು ನಿಮ್ಮ ವೈದ್ಯರು ಸೂಚಿಸಿದಂತೆ ಔಷಧಿ ತೆಗೆದುಕೊಳ್ಳುವುದನ್ನು ಮುಂದುವರೆಸಬೇಕು.
* ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ನಿಮಗೆ ಕೆಲವು ಔಷಧಿಗಳನ್ನು ಸೂಚಿಸಿ ಮನೆಗೆ ಕಳುಹಿಸಲಾಗುತ್ತದೆ. ನಿಮ್ಮ ವೈದ್ಯರು ನೀವು ಮಾತ್ರೆ ತೆಗೆದುಕೊಳ್ಳಬೇಕೆ ಅಥವಾ ಬೇಡವೆ ಎಂದು ನಿರ್ಧರಿಸುತ್ತಾರೆ. ಇಂಜೆಕ್ಷನ್ ಅಗತ್ಯವಾದಲ್ಲಿ, ನಿಮ್ಮ ವೈದ್ಯರು ನಿಮ್ಮೊಂದಿಗೆ ಚರ್ಚಿಸುತ್ತಾರೆ ಹಾಗೂ ನರ್ಸಿಂಗ್ ಸಿಬ್ಬಂದಿ ನಿಮಗೆ ಅಥವಾ ನಿಮ್ಮ ಕುಟುಂಬದ ಸದಸ್ಯರಿಗೆ ಈ ಔಷಧಿಯನ್ನು ಹೇಗೆ ತೆಗೆದುಕೊಳ್ಳಬೇಕೆಂದು ಕಲಿಸುತ್ತಾರೆ.
* ನೋವು ನಿಯಂತ್ರಣಕ್ಕಾಗಿ ನಿಮಗೆ ಕೆಲವು ನಿರ್ದಿಷ್ಟ ಔಷಧಿಗಳನ್ನು ನೀಡಿ ಮನೆಗೆ ಕಳುಹಿಸಲಾಗುತ್ತದೆ. ವ್ಯಾಯಾಮಕ್ಕೆ 30 ನಿಮಿಷಗಳ ಮೊದಲು ನೀವು ನಿಮ್ಮ ನೋವಿನ ಔಷಧಿಯನ್ನು ಸೇವಿಸಬೇಕು.
ಚಿಕಿತ್ಸೆ ಬಳಿಕ
* ಮುಂದಿನ 4-6 ವಾರಗಳವರೆಗೆ ಲೈಂಗಿಕ ಸಂಪರ್ಕವನ್ನು ನಿಲ್ಲಿಸಬೇಕು. ಲೈಂಗಿಕ ಚಟುವಟಿಕೆಯನ್ನು 6 ವಾರಗಳ ಅನುಸರಣಾ ಪೂರ್ವಾನುಮತಿಯ ಭೇಟಿಯ ನಂತರ ಸಾಮಾನ್ಯವಾಗಿ ಮುಂದುವರೆಸಬಹುದು.
* ನೀವು ಸಾಮಾನ್ಯವಾಗಿ ಕೆಲಸಕ್ಕೆ ಎರಡರಿಂದ ಮೂರು ತಿಂಗಳಿನೊಳಗೆ ಮರಳಬಹುದು ಅಥವಾ ನಿಮ್ಮ ವೈದ್ಯರು ಸೂಚಿಸಿದ ಮೇರೆಗೆ ಮರಳಬಹುದು.
* 6 ವಾರಗಳ ಅನುಸರಣಾ ಪೂರ್ವಾನುಮತಿಯ ಭೇಟಿಯವರೆಗೂ ನೀವು ಕಾರು ಚಾಲನೆ ಮಾಡುವಂತಿಲ್ಲ.
* ಸ್ಟೇಪಲ್‌ಗಳನ್ನು ತೆಗೆಯುವವರೆಗೂ ಶವರ್ ಸ್ನಾನ ಅಥವಾ ಟಬ್ ಸ್ನಾನ ಮಾಡುವಂತಿಲ್ಲ.
* ಶಾಖ ಅಥವಾ ಐಸ್ ಅನ್ನು ಬಳಸಬೇಕಾದರೆ, ನಿಮ್ಮ ಸ್ಟೇಪಲ್ ಅನ್ನು ತೆರೆಯುವವರೆಗೂ ನೀವು ನಿಮ್ಮ ಅಳವಡಿಕೆಯ ಸಾಧನ ಒದ್ದೆಯಾಗದಂತೆ ನೋಡಿಕೊಳ್ಳುವುದನ್ನು ಮರೆಯಬೇಡಿ.
ಹಾಸ್‌ಮ್ಯಾಟ್ ಮಂಡಿ ಮರುಜೋಡಣಾ ಶಸ್ತ್ರ ಚಿಕಿತ್ಸೆ, ಅಧಿಕ ಬಾಗುವಿಕೆ ಮತ್ತು ಶಸ್ತ್ರಚಿಕಿತ್ಸೆಯ ಅಳವಡಿಕೆಯ ಪದ್ಧತಿಯನ್ನು ಕನಿಷ್ಟಗೊಳಿಸುವ ರೊಟೇಟಿಂಗ್ ಪ್ಲಾಟ್ ಫಾರ್ಮ್‌ಗಾಗಿ ಕಂಪ್ಯೂಟರ್ ಬೆಂಬಲಿತ ನೇವಿಗೇಷನ್ ಪದ್ಧತಿಯನ್ನು ಅಳವಡಿಸಿರುವ ದಕ್ಷಿಣ ಭಾರದ ಮೊದಲ ಆಸ್ಪತ್ರೆಯಾಗಿದೆ. ಪ್ಲೆಕ್ಸ್ ಸೇರಿಸಲಾದ ಮಂಡಿಯ ಮರುಜೋಡಣೆಯು ಮೊದಲ ಮಂಡಿ ಜೋಡಣೆಯಾಗಿದ್ದು, ಇದು ಸುಮಾರು 155 ಡಿಗ್ರಿಯವರೆಗೂ ಮಂಡಿಯನ್ನು ಸುರಕ್ಷಿತವಾಗಿ ಬಾಗಿಸಲು ನಿರ್ದಿಷ್ಟಗೊಳಿಸಲಾಗಿದೆ.
ತೋಟಗಾರಿಕೆ, ಗಾಲ್ಫ್ ಆಡುವ ಹವ್ಯಾಸಗಳು ಅಥವಾ ಪ್ರಾರ್ಥನೆ ಮಾಡಲು ಮಂಡಿಯೂರುವುದು ಮತ್ತು ಅಡ್ಡಕಾಲು ಹಾಕಿ ಕುಳಿತುಕೊಳ್ಳುವುದು, ಇತ್ಯಾದಿ ಚಟುವಟಿಕೆಗಳು ಹೆಚ್ಚು ಡಿಗ್ರಿಯ ಬಾಗುವಿಕೆಯನ್ನು ಕೇಳುತ್ತದೆ. ಸಾಮಾನ್ಯವಾಗಿ ಮಂಡಿ ಮರುಜೋಡಣೆಯನ್ನು 125 ಡಿಗ್ರಿಯವರೆಗೂ ಬಾಗಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ರೊಟೇಟಿಂಗ್ ಪ್ಲಾರ್ಮ್ ಮಂಡಿಯ ತಿರುಬುವಿಕೆಯ ತಂತ್ರಜ್ಞಾನವನ್ನು ಹೊಂದಿದೆ. ರೊಟೇಟಿಂಗ್ ಪ್ಲಾಟ್ ಫಾರ್ಮ್ ಮಂಡಿಯು ಎಫ್.ಡಿ.ಎ. ಯಿಂದ ಅಂಗೀಕರಿಸಲ್ಪಟ್ಟ ಚಲನೆ ಆಧಾರಿತ ಮಂಡಿಯ ಅಳವಡಿಕೆಯಾಗಿದೆ.
– ಡಾ. ಥಾಮಸ್ ಚಾಂಡಿ
ಹಾಸ್‌ಮ್ಯಾಟ್ ಆಸ್ಪತ್ರೆ, ಬೆಂಗಳೂರು.
ಮೊ. ಸಂಖ್ಯೆ: 9448311802.

loading...

No comments