ಶಿವಮೊಗ್ಗ ಕೋಮುಗಲಭೆಗೆ ಆಸ್ಪದ ನೀಡುವ ವೀಡಿಯೊ. suo-moto ಕೇಸ್ ದಾಖಲಿಸಿದ ಪೊಲೀಸರು
ಶಿವಮೊಗ್ಗ: ಕುವೆಂಪು ವಿವಿಯ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ಬುರ್ಖಾ ವಿವಾದ ಜಿಲ್ಲೆಯಲ್ಲಿ ಬಾರಿ ಸದ್ದು ಮಾಡಿತ್ತು . ಇದೀಗ ಈ ಬುರ್ಖಾ ಧಾರಣೆ ವಿಷಯಕ್ಕೆ ಸಂಬಂಧಿಸಿ ಶಿವಮೊಗ್ಗ ಮೂಲದ ದುಬೈ ನಲ್ಲಿ ಇರುವ ಮುಸ್ಲಿಂ ಯುವಕರಿಬ್ಬರು ಕೋಮು ಗಲಭೆಗೆ ಆಸ್ಪದ ನೀಡುವ ವೀಡಿಯೊ ಒಂದನ್ನು ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ ,ವೀಡಿಯೊ ಅಲ್ಲಿ ಬಹಳ ಅಶ್ಲೀಲಾವಾಗಿ ಮಾತನಾಡಿ ಒಂದು ಸಮುದಾಯಕ್ಕೆ ನೇರವಾದ ಬೆದರಿಕೆ ಹಾಕಿ ಶಿವಮೊಗ್ಗ ಪೊಲೀಸರಿಗೆ ಸವಾಲು ಹಾಕಿದ್ದಾರೆ .ಈ ವೀಡಿಯೊ ವಿರುದ್ಧ ಇನ್ನೊಂದೂ ಕೋಮಿನ ಯುವಕನೊಬ್ಬ ಕೂಡ ವೀಡಿಯೊ ಮೂಲಕ ಪ್ರತಿಕ್ರಿಯೆ ನೀಡಿದ್ದಾನೆ .ಈ ಎಲ್ಲಾ ವಿಡಿಯೋಗಳು ಶಿವಮೊಗ್ಗದ ಎಲ್ಲೆಡೆ ಹರಿದಾಡಿ ಇದೀಗ ಶಿವಮೊಗ್ಗ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ .
ಇಂದಿನ ಬೆಳವಣಿಗೆಯಲ್ಲಿ ಕೋಮು ಗಲಭೆಗೆ ಆಸ್ಪದ ನೀಡುವ ವೀಡಿಯೊ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ suo-moto ಕೇಸ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ
ಕೋಮುಗಲಭೆಗೆ ಆಸ್ಪದ ನೀಡುವ ವೀಡಿಯೊ
loading...
No comments