Breaking News

ಶಾಂತಿಯುತ ಮತದಾನ : ಗೋವಾದಲ್ಲಿ 83%ರಷ್ಟು ,ಪಂಜಾಬ್’ನಲ್ಲಿ 70%ರಷ್ಟು ಹಕ್ಕು ಚಲಾವಣೆ

ಪಣಜಿ/ ಚಂಡಿಗಢ ನವದೆಹಲಿ, ಫೆ.4-ನೋಟು ಅಮಾನ್ಯ ಕ್ರಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನಪ್ರಿಯತೆಯ ಅಳತೆಗೋಲು ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮೊದಲ ಹಂತವಾಗಿ, ಗೋವಾದಲ್ಲಿ ಮತ್ತು ಪಂಜಾಬ್   ಇಂದು ಬಿಗಿಭದ್ರತೆಯೊಂದಿಗೆ ಮನದಾನ ನಡೆಯಿತು. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದಂತೆ  ಗೋವಾದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಪಂಜಾಬ್‍ನ 117 ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಪಂಜಾಬ್’ನಲ್ಲಿ 70%, ಗೋವಾದಲ್ಲಿ 83%ರಷ್ಟು ಹಕ್ಕು ಚಲಾವಣೆ ಆಗಿದೆ. ಈ ಎರಡೂ ರಾಜ್ಯಗಳಲ್ಲಿ ಸರಾಸರಿ ಶೇ.76ರಷ್ಟು ಮತದಾನವಾಗಿದೆ
loading...

No comments