ಸಿಪಿಎಂ ಕಛೇರಿ ಬೆಂಕಿ ಹಿಂದೆ ಸಂಸದ ನಳಿನ್ ಕುಮಾರ್ ಕೈವಾಡ.?
ಮಂಗಳೂರು : ಮಂಗಳೂರಿನ ಉಳ್ಳಾಲದಲ್ಲಿ ಸಿಪಿಎಂ ಪಕ್ಷದ ಕಛೇರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಷ ವ್ಯಕ್ತಪಡಿಸಿದ ಸಿಪಿಎಂ ಮುಖಂಡ ವಸಂತ್ ಆಚಾರಿ ಈ ಬೆಂಕಿಯ ಹಿಂದೆ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ಶುಕ್ರವಾರ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಪಿಎಂ ಮುಖಂಡ ವಸಂತ್ ಆಚಾರಿ ಉಳ್ಲಾಲದಲ್ಲಿ ಸಿಪಿಎಂ ಸಂಘಟನೆ ಪ್ರಬಲವಾಗಿದ್ದು ಇದನ್ನು ಸಹಿಸಲಾಗದೆ ಸಂಘಪರಿವಾರದ ಮುಖಂಡರ ಕುಮ್ಮಕ್ಕಿನಿಂದಲೇ ಯಾರೋ ಕಿಡಿಗೇಡಿಗಳು ಪಕ್ಷದ ಕಛೇರಿಗೆ ಬೆಂಕಿ ಹಚ್ಚಿದ್ದು, ಇದರ ಹಿಂದೆ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ನೇರ ಕೈವಾಡವೂ ಇದೆ ಎಂದು ಆರೋಪ ಮಾಡಿದರು.
ಈಗಾಗಲೇ ಸಾಮಾಜಿಕ ಜಾಲತಾಣಗಲ್ಲಿ ಸಿಪಿಎಂ ಸಂಘಟನೆ ಬಗ್ಗೆ ವ್ಯಾಪಕ ಅಪಪ್ರಚಾರ ಮಾಡಲಾಗುತ್ತಿದೆ, ಇಷ್ಟೇ ಅಲ್ಲದೆ ಕೋಮು ಪ್ರಚೋದಿತ ಬರಹಗಳನ್ನು ಹರಿಬಿಡಲಾಗಿದೆ ಇದರ ಹಿಂದಿರುವ ದುಷ್ಕರ್ಮಿಗಳನ್ನು , ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕ್ರಮಕೈಗೊಳ್ಳುವಂತೆ ಪೋಲೀಸರಲ್ಲಿ ಆಗ್ರಹಿಸಿದ್ದಾರೆ.
ಬೆಂಕಿಗೆ ಆಹುತಿಯಾಗಿದ್ದ ಸಿಪಿಎಂ ಕಛೇರಿ |
ಈಗಾಗಲೇ ಸಾಮಾಜಿಕ ಜಾಲತಾಣಗಲ್ಲಿ ಸಿಪಿಎಂ ಸಂಘಟನೆ ಬಗ್ಗೆ ವ್ಯಾಪಕ ಅಪಪ್ರಚಾರ ಮಾಡಲಾಗುತ್ತಿದೆ, ಇಷ್ಟೇ ಅಲ್ಲದೆ ಕೋಮು ಪ್ರಚೋದಿತ ಬರಹಗಳನ್ನು ಹರಿಬಿಡಲಾಗಿದೆ ಇದರ ಹಿಂದಿರುವ ದುಷ್ಕರ್ಮಿಗಳನ್ನು , ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕ್ರಮಕೈಗೊಳ್ಳುವಂತೆ ಪೋಲೀಸರಲ್ಲಿ ಆಗ್ರಹಿಸಿದ್ದಾರೆ.
loading...
No comments