ಬಂದ್ ಗೆ ಕರೆಕೊಟ್ಟಿರುವವರಿಗೆ ಚಪ್ಪಲಿ ಏಟು ನೀಡಬೇಕು - ಯು.ಟಿ.ಖಾದರ್
ಮಂಗಳೂರು : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಆಗಮನ ವಿರೋಧಿಸಿ ಬಂದ್ ಗೆ ಕರೆ ನೀಡಿರುವ ಸಂಘಪರಿವಾರದ ವಿರುದ್ದ ಸಚಿವ ಯು.ಟಿ.ಖಾದರ್ ಕಿಡಿಕಾರಿದ್ದಾರೆ. ಸಂವಿಧಾನ ವಿರೋಧಿ ಶಕ್ತಿಗಳಿಗೆ ಚಪ್ಪಲಿ ಏಟು ನೀಡಬೇಕು. ಬಂದ್ ಗೆ ಕರೆಕೊಟ್ಟಿರುವವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಚಪ್ಪಲಿಯಷ್ಟೂ ಯೋಗ್ಯತೆಯಿಲ್ಲ.ಅತಿಥಿಗಳಿಗೆ ಈ ರೀತಿ ಅವಮಾನ ಮಾಡುವುದು ಸರಿಯಲ್ಲ ಎಂದು ಬಂದ್ ಗೆ ಕರೆ ನೀಡಿದ ಸಂಘಪರಿವಾರದ ವಿರುದ್ಧ ಯು.ಟಿ.ಖಾದರ್ ಕಿಡಿಕಾರಿದ್ದಾರೆ.
ಕೇರಳದಾದ್ಯಂತ ಸಿಪಿಎಂ ನಡೆಸುತ್ತಿದೆ ಎನ್ನಲಾಗುತ್ತಿರುವ ಸಂಘಪರಿವಾರ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಕರಾವಳಿಯ ಹಿಂದೂ ಸಂಘಟನೆಗಳು ಕೇರಳ ಮುಖ್ಯಮಂತ್ರಿ ಪಿಣರಾಯಿಯವರ ಮಂಗಳೂರು ಭೇಟಿ ವಿರೋಧಿಸುತ್ತಿದೆ. ಇಂದು ನಡೆಸುತ್ತಿರುವ ಹರತಾಳದಿಂದಾಗಿ ಮಂಗಳೂರಿನಾದ್ಯಂತ ಬಿಗುವಿನ ವಾತಾವರಣ ಉಂಟಾಗಿದೆ. ಅಲ್ಲಲ್ಲಿ ವಾಹನಗಳಿಗೆ ಕಲ್ಲುತೂರಾಟ ನಡೆಸಿದೆ. ಅನೇಕ ಹಿಂದೂ ಸಂಘಟನೆ ನಾಯಕರನ್ನು ಬಂಧಿಸಲಾಗಿದೆ.
loading...
No comments