Breaking News

ಪಾಕಿಸ್ತಾನದಲ್ಲಿ ಪ್ರೇಮಿಗಳ ದಿನ ಆಚರಣೆಗೆ ಬ್ರೇಕ್ ಹಾಕಿದ ಇಸ್ಲಮಾಬಾದ್ ಹೈಕೋರ್ಟ್.

ಇಸ್ಲಮಾಬಾದ್ : ಪಾಕಿಸ್ತಾನದಲ್ಲಿ ಪ್ರೇಮಿಗಳ ದಿನಾಚರಣೆಯನ್ನು ನಿಶೇಧಿಸಲಾಗಿದೆ. ಇಸ್ಲಮಾಬಾದ್ ನ ಹೈಕೋರ್ಟ್ ಪಾಕಿಸ್ತಾನದಲ್ಲಿ  ಪ್ರೇಮಿಗಳ ದಿನಾಚರಣೆ ಆಚರಿಸದಂತೆ ತಡೆಯಾಜ್ಞೆ ಹೇರಿದೆ. ಪ್ರೇಮಿಗಳ ದಿನಾಚರಣೆ ಆಚರಿಸೋದು ಇಸ್ಲಾಮಿಕ್ ಸಂಪ್ರದಾಯಗಳಿಗೆ ವಿರುದ್ದವಾಗಿದ್ದು, ಹಾಗಾಗಿ ಅದನ್ನು ನಿಶೇಧ ಮಾಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತಕ್ಷಣವೇ ಆಚರಣೆಯನ್ನು ನಿಶೇಧಿಸಬೇಕು ಎಂದಿದೆ.
ಮಾಧ್ಯಮಗಲ್ಲಿ, ಪೇಪರ್ ಗಳಲ್ಲಿ ಎಲ್ಲಿಯೂ ಪ್ರೇಮಿಗಳ ದಿನಾಚರಣೆಯ ಬಗ್ಗೆ ಕಾರ್ಯಕ್ರಮಗಳ ಪ್ರಸಾರ, ಸುದ್ದಿ ಪ್ರಕಟಿಸುವುದನ್ನು ತಕ್ಷಣ ನಿಲ್ಲಿಸುವಂತೆ ಹೇಳಿದೆ. ಪಾಕಿಸ್ತಾನದಲ್ಲಿ ಪ್ರತಿವರ್ಷ ಧಾರ್ಮಿಕ ಗುಂಪುಗಳು ಪ್ರೇಮಿಗಳ ದಿನಾಚರಣೆ ದಿನ ಜೋಡಿ ಹಕ್ಕಿಗಳ ಮೇಲೆ ಹಲ್ಲೆ ನಡೆಸುವುದು ಅವ್ಯಾಹತವಾಗಿ ನಡೆಯುತ್ತಿತ್ತು. ಭಾರತದಲ್ಲಿಯೂ ಹಲವು ಸಂಘಟನೆಗಳು ಪ್ರೇಮಿಗಳ ದಿನಾಚರಣೆ ವಿರೋಧಿಸುತ್ತದೆ.
loading...

No comments