Breaking News

ರಾಷ್ಟ್ರೀಯ ಮಟ್ಟದ ಬಿಲ್ಲುಗಾರ್ತಿ ಈಗ ಕಿತ್ತಳೆ ಹಣ್ಣು ಮಾರಾಟಗಾರ್ತಿ


ಗುವಹಾಟಿ : ರಾಷ್ಟ್ರೀಯ ಮಟ್ಟದ ಬಿಲ್ಲುಗಾರ್ತಿಯೊಬ್ಬರು ಅಸ್ಸಾಂ ರಾಜ್ಯದ ಚಿರಾಂಗ್ ಜಿಲ್ಲೆಯ ಸಣ್ಣ ಮಾರುಕಟ್ಟೆಯೊಂದರಲ್ಲಿ ತಾನು ಭೂತಾನ್ ದೇಶದಿಂದ ಖರೀದಿಸಿದ ಕಿತ್ತಳೆ ಹಣ್ಣುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಬುಲಿ ಬಸುಮತರಿ ಎಂಬ ಈ ಬಿಲ್ಲುಗಾರ್ತಿ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ತರಬೇತಿ ಪಡೆದವರಾಗಿದ್ದು  ರಾಷ್ಟ್ರೀಯ ಮಟ್ಟದ  ಸಬ್-ಜೂನಿಯರ್ ಬಿಲ್ಲುಗಾರಿಕೆ ಚಾಂಪಿಯನಶಿಪ್ಪಿನಲ್ಲಿ ಎರಡು ಚಿನ್ನದ ಪದಕಗಳು ಹಾಗೂ ಒಂದು ಬೆಳ್ಳಿ ಪದಕ ಪಡೆದಾಕೆ. ಆದರೆ ಅವುಗಳೆಲ್ಲವೂ ಆಕೆಯ ಪಾಲಿಗೆ ಈಗ ಒಂದು ನೆನಪಷ್ಟೇ. ಕಿತ್ತು ತಿನ್ನುವ ಬಡತನ ಆಕೆಯನ್ನು ಕಿತ್ತಳೆ ಹಣ್ಣು ಮಾರಾಟಗಾರ್ತಿಯನ್ನಾಗಿಸಿದೆ.

loading...

No comments