Breaking News

ಸಾವಿರಾರು ಸೆಲ್ವಂಗಳನ್ನು ನೋಡಿದ್ದೇವೆ… ಭಯಪಟ್ಟಿದ್ದೇ ಇಲ್ಲ, ಶಶಿಕಲಾ


ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ ಅವರ ಸಿಎಂ ಹುದ್ದೆಯ ಹೋರಾಟ ಮುಂದುವರಿದಿದೆ. ಈ ನಡುವೆ ಹಂಗಾಮಿ ಸಿಎಂ ಓ. ಪನ್ನೀರ ಸೆಲ್ವಂ ರಾಜಕೀಯ ದೊಂಬರಾಟದ ನಡುವೆಯೇ ಸೋಮವಾರ ತಮ್ಮ ಕರ್ತವ್ಯ ನಿರ್ವಹಣೆಗೆ ಮುಂದಾಗಿದ್ದಾರೆ. ಈ ಎಲ್ಲಾ ವಿದ್ಯಮಾನಗಳ ಬೆನ್ನಿಗೆ ಶಶಿಕಲಾ ಅವರು ಪನ್ನೀರ ಸೆಲ್ವಂ ವಿರುದ್ಧ ಕೆಂಡಾಮಂಡಲವಾಗಿದ್ದು, ‘ನಾವು ಸಾವಿರಕ್ಕೂ ಹೆಚ್ಚು ಸೆಲ್ವಂಗಳನ್ನು ನೋಡಿದ್ದೇವೆ. ಆದರೆ ಯಾರಿಗೂ ಭಯಪಟ್ಟವರೇ ಅಲ್ಲ’ ಎಂದಿದ್ದಾರೆ.
ರಾಜ್ಯಪಾಲರು ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಶಶಿಕಲಾ ಈಗ ಪನ್ನೀರ ಸೆಲ್ವಂ ವಿರುದ್ಧವೇ ಕಿಡಿ ಕಾರಿದ್ದಾರೆ. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಶಶಿಕಲಾ ಅವರು ಜಯಲಲಿತಾ ಅವರೊಂದಿಗಿನ ಅನುಭವಗಳನ್ನೆಲ್ಲ ತಮ್ಮ ಮಾತಿನುದ್ದಕ್ಕೂ ಹೇಳಿಕೊಂಡು ಬಂದರು. ‘ಕಳೆದ 33 ವರ್ಷಗಳಲ್ಲಿ ಜತೆ ಜೊತೆಯಾಗಿದ್ದ ನಾವಿಬ್ಬರು ಎಲ್ಲವನ್ನೂ ನೋಡಿದ್ದೇವೆ’ ಎಂದು ಪರೋಕ್ಷವಾಗಿ ಸೆಲ್ವಂಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.
-viajayavani
loading...

No comments