ಮೂರು ವರ್ಷಗಳ ನಂತರ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಸಚಿನ್ ತೆಂಡುಲ್ಕರ್.
ಮುಂಬೈ : ಸಚಿನ್ ತೆಂಡುಲ್ಕರ್ ಕ್ರಿಕೆಟ್ ಗೆ ನಿವೃತ್ತ್ತಿ ಘೋಷಿಸಿ ಅದಾಗಲೇ ಮೂರು ವರ್ಷಗಳಾಗುತ್ತಾ ಬಂತು, ಈಗ ಮೂರು ವರ್ಷಗಳ ನಂತರ ಮತ್ತೆ 'ಮಾಸ್ಟರ್ ಬ್ಲಾಸ್ಟರ್' ಬ್ಯಾಟ್ ಹಿಡಿದುಕೊಂಡು ಕ್ರಿಕೆಟ್ ಮೈದಾನಕ್ಕೆ ಕಾಲಿಡುತ್ತಿದ್ದಾರೆ. ಆದರೆ ನಿಜ ಜೀವನದಲ್ಲಿ ಅಲ್ಲ ಬೆಳ್ಳಿಪರದೆಯಲ್ಲಿ.
ಕ್ರಿಕೆಟ್ ದೇವರೆಂದೇ ಪ್ರಸಿದ್ಧಿ ಪಡೆದಿರುವ ಸಚಿನ್ ತೆಂಡುಲ್ಕರ್ ತಮ್ಮ ಜೀವನಾಧಾರಿತ ಚಲನಚಿತ್ರ 'ಸಚಿನ್ : ಎ ಬಿಲಿಯನ್ ಡ್ರೀಂ' ನ ಬಿಡುಗಡೆ ದಿನವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಘೋಷಿಸಿದ್ದಾರೆ. ಮೇ 26ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು 2013ರಲ್ಲಿ ಇದೇ ದಿನ ಸಚಿನ್ ತಮ್ಮ ಐಪಿಎಲ್ ಕ್ರಿಕೆಟ್ ಆಟಕ್ಕೆ ನಿವೃತ್ತಿ ಘೋಷಿಸಿದ್ದರು. ಆ ಐಪಿಎಲ್ ಟೂರ್ನಮೆಂಟ್ ನಲ್ಲಿ ಮುಂಬೈ ವಿಜಯಿಯಾಗಿತ್ತು.
ಈ ಹಿಂದೇ ಭಾರತದ ಮಾಜಿ ನಾಯಕರಾದ ಮಹಮ್ಮದ್ ಅಜರುದ್ದೀನ್ ಮತ್ತು ಎಮ್.ಎಸ್ ಧೋನಿ ಜೀವನ ಚರಿತ್ರೆ ಆಧರಿಸಿ ಸಿನಿಮಾಗಳು ಬಿಡುಗಡೆಯಾಗಿವೆ. ಇದರಲ್ಲಿ ಎಮ್.ಎಸ್ ಧೋನಿ ಜೀವನ ಕಥೆ ಆಧರಿತ, ಸುಶಾಂತ್ ಸಿಂಗ್ ಅಭಿನಯದ 'ಎಮ್.ಎಸ್ ಧೋನಿ - ದಿ ಅನ್ ಟೋಲ್ಡ್ ಸ್ಟೋರಿ' ಚಲನ ಚಿತ್ರಕ್ಕೆ ಅಗಾಧ ಯಶಸ್ಸು ಸಿಕ್ಕಿದ್ದಲ್ಲದೆ ಬಾಕ್ಸ್ ಆಫೀಸ್'ನಲ್ಲಿ ಉತ್ತಮ ಹಣ ಬಾಚಿತ್ತು.
ಸಚಿನ್ ತೆಂಡುಲ್ಕರ್ ಮಾಡಿರೋ ಟ್ವೀಟ್ :
The answer to the question that everyone's asking me is here. Mark your calendars and save the date. @SachinTheFilm releases 26.05.17 pic.twitter.com/aS0FGNjGKY— sachin tendulkar (@sachin_rt) February 13, 2017
Come witness a journey called #SACHIN. Presenting 'Sachin A Billion Dreams' teaser. https://t.co/HH3BwZfdE2 #SachinTeaser @sachin_rt— Sachin The Film (@SachinTheFilm) April 14, 2016
loading...
No comments