Breaking News

ಮುಸ್ಲಿಂ ಆಗಿ ಭಾರತದ ಪರ ಯಾಕೆ ಆಡುತ್ತೀರ, ಪಾಕಿಸ್ತಾನಿ ಯುವತಿ ಕೇಳಿದ ಪ್ರಶ್ನೆಗೆ ಇರ್ಫಾನ್ ಪಠಾಣ್ ಕೊಟ್ಟ ಉತ್ತರ.

ನಾಗ್ಪುರ : ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಭಾರತ ಕ್ರಿಕೆಟ್ ತಂಡದ ವೇಗಿ ಇರ್ಫಾನ್ ಪಠಾಣ್ ಅಲ್ಲಿ ನೆರೆದಿದ್ದ ಜನರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ಸಂದರ್ಭದಲ್ಲಿ ಇರ್ಫಾನ್ ಪಠಾಣ್ ತಮ್ಮ ಜೀವನದಲ್ಲಿ ಜರುಗಿದ ನೈಜ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

ಪಾಕಿಸ್ತಾನದ ಲಾಹೋರ್ ನಲ್ಲಿ ಕ್ರಿಕೆಟ್ ಪಂದ್ಯ ಆಡಿದ ಬಳಿಕ ಇರ್ಫಾನ್ ಪಠಾಣ್ ಬಳಿ ಬಂದು ಪಾಕಿಸ್ತಾನಿ ಹುಡುಗಿಯೊಬ್ಬಳು 'ನೀವೊಬ್ಬ ಮುಸ್ಲಿಂ ಧರ್ಮಿಯನಾಗಿಯೂ ಭಾರತದ ಪರ ಯಾಕೆ ಆಡುತ್ತೀರ' ಎಂದು ಪ್ರಶ್ನೆ ಕೇಳಿದ್ದಾಳೆ.

ಇದಕ್ಕೆ ಉತ್ತರಿಸಿದ ಇರ್ಫಾನ್ ಪಠಾಣ್ 'ಹೌದು, ಯಾಕೆಂದರೆ ಭಾರತದ ಪರ ಆಡುವುದು ನನಗೆ ಹೆಮ್ಮೆಯ ವಿಚಾರ' ಎಂದು ಉತ್ತರಿಸಿದ್ದಾರೆ. ಅಂದಿನ ಆ ಘಟನೆ ನನಗೆ ಈಗ ಕೂಡ ಉತ್ತಮವಾದುದನ್ನು ಮಾಡಲು ಪ್ರೇರೇಪಿಸುತ್ತದೆ, ಅದಲ್ಲದೆ ಸೌರವ್ ಗಂಗೂಲಿ ಅವರಿಂದ ಭಾರತದ ಟೋಪಿ ಪಡೆದುಕೊಂಡಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದಿದ್ದಾರೆ.

ಇರ್ಫಾನ್ ಪಠಾಣ್ ತಮ್ಮ ಕ್ರಿಕೆಟ್ ವೃತ್ತಿಯನ್ನು 2003ರಲ್ಲಿ 'ಬಾರ್ಡರ್ ಗವಾಸ್ಕರ್ ಟ್ರೋಫಿ'ಯಲ್ಲಿ ಆಸ್ಟ್ರೇಲಿಯಾ ವಿರುದ್ದ ಆಡುವುದರ ಮೂಲಕ ಪ್ರಾರಂಭಿಸಿದ್ದರು. ಪಠಾಣ್ ಇದುವರೆಗೆ ಭಾರತದ ಪರ 29ಟೆಸ್ಟ್, 120ಏಕದಿನ ಪಂದ್ಯ ಹಾಗೂ 24 ಟಿ-20 ಪಂದ್ಯಗಳನ್ನು ಆಡಿ 1800 ರನ್ ಹಾಗೂ 301 ವಿಕೆಟ್ ಪಡೆದಿದ್ದಾರೆ.
loading...

No comments