Breaking News

ಪಾಕಿಸ್ತಾನದಲ್ಲಿ ಭೀಕರ ಆತ್ಮಾಹುತಿ ಬಾಂಬ್ ದಾಳಿ, ಇಬ್ಬರು ಪೋಲೀಸ್ ಅಧಿಕಾರಿಗಳು ಸೇರಿ 16ಸಾವು.

ಲಾಹೋರ್ : ಪಾಕಿಸ್ತಾನದ ಲಾಹೋರ್ ನಲ್ಲಿ ಸಂಭವಿಸಿದ ಪ್ರಬಲ ಆತ್ಮಾಹುತಿ ಬಾಂಬ್ ಧಾಳಿಗೆ 16 ಜನ ಮೃತರಾಗಿದ್ದು 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಪೋಲೀಸ್ ಅಧಿಕಾರಿಗಳು, ನಾಲ್ಕು ಜನ ಸಂಚಾರಿ ಪೋಲೀಸರು ಸೇರಿದ್ದಾರೆ.

ಪಾಕಿಸ್ತಾನದ ಪಂಜಾಬ್ ಸರ್ಕಾರ ಔಷದಿಗಳ ಮೇಲೆ ಹೊಸದಾಗಿ ಜಾರಿಗೆ ತಂದಿರುವ ಮಸೂಧೆ ವಿರೋಧಿಸಿ ಕೆಮಿಸ್ಟ್ ಗಳು ಹಾಗೂ ಔಷದಿ ತಯಾರಕರು ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಉಂಟಾದ ವಾಹನ ದಟ್ಟನೆ ನಿಯಂತ್ರಿಸಲು ಟ್ರಾಫಿಕ್ ಡಿಐಜಿ ಸಯ್ಯದ್ ಅಹ್ಮದ್ ಮುಬೀನ್, ಎಸ್ಎಸ್ಪಿ ಜಾಹೀದ್ ಗೊಂಡಲ್ ಮತ್ತು ಟ್ರಾಫಿಕ್ ಪೋಲೀಸರು ಯತ್ನಿಸುತ್ತಿದ್ದರು. ಆ ಸಂದರ್ಭದಲ್ಲಿ ಸೈಕಲ್ ನಲ್ಲಿ ಬಂದ ಯುವಕ ಪೋಲೀಸರ ಬಳಿ ಬಂದು ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾನೆ. 

ಸ್ಫೋಟದ ತೀವ್ರತೆಗೆ ಸ್ಥಳದಲ್ಲಿಯೇ ಪೋಲೀಸ್ ಅಧಿಕಾರಿಗಳು ಸೇರಿ 16ಜನ ಮೃತಪಟ್ಟಿದ್ದಾರೆ 40ಕ್ಕೂ ಅಧಿಕ ಮಂದಿ ಗಾಯ ಗೊಂಡಿದ್ದಾರೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ 10ಕಿಮೀ ದೂರದ ವರೆಗು ಸ್ಫೋಟದ ಸದ್ದು ಕೇಳಿಸಿದೆ. ಮೃತ ದೇಹಗಳು ಗುರುತು ಸಿಗದಷ್ಟು ಛಿದ್ರ ಛಿದ್ರವಾಗಿದೆ. ಪಾಕಿಸ್ತಾನದ ತಾಲೀಬಾನ್ ಉಗ್ರಸಂಘಟನೆಯ ಬಣವಾದ ಜಮಾತ್-ಉಲ್-ಅಹ್ರಾರ್ ಸ್ಫೋಟದ ಹೊಣೆ ಹೊತ್ತುಕೊಂಡಿದೆ.
loading...

No comments