Breaking News

ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಜೈಲು ಪಾಲು



 ಸಿಎಂ ಪಟ್ಟಕ್ಕೆ ಶಶಿಕಲಾ ಕನಸು ಭಗ್ನ
ಹೊಸದಿಲ್ಲಿ: ಮುಖ್ಯಮಂತ್ರಿ ಸ್ಥಾನಕ್ಕಾಗಿ ಓ. ಪನ್ನೀರ್‌ಸೆಲ್ವಂ ಅವರೊಂದಿಗೆ ಸಮರಕ್ಕೆ ಇಳಿದಿರುವ ವಿ.ಕೆ. ಶಶಿಕಲಾಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಮಂಗಳವಾರ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಸುಪ್ರೀಂಕೋರ್ಟ್ ತೀರ್ಪಿನಿಂದ ಸಿಎಂ ಪಟ್ಟಕ್ಕೇರುವ ಶಶಿಕಲಾ ಕನಸು ಭಗ್ನವಾಗಿದೆ. ಪನ್ನೀರ್‌ ಸೆಲ್ವಂಗೆ ಬಲ ಬಂದಿದೆ. ಕೆಲವೇ ಕ್ಷಣಗಳಲ್ಲಿ ಪ್ರಕರಣದ ದೋಷಿಗಳನ್ನು ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿಗೆ ಕಳುಹಿಸಲಾಗುವುದು.

ಜಯಲಲಿತಾ, ಶಶಿಕಲಾ ಮತ್ತು ಇತರರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ, ಸುಧಾಕರನ್‌, ಇಳವರಿಸಿಯನ್ನ ಕೋರ್ಟ್‌ ಅಪರಾಧಿಗಳೆಂದು ಘೋಷಿಸಿ, 4 ವರ್ಷ ಜೈಲು ಶಿಕ್ಷೆ, 10 ಕೋಟಿ ರೂ. ದಂಡ ವಿಧಿಸಿದೆ. 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಇವರು ಸ್ಪರ್ಧಿಸುವಂತಿಲ್ಲ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಾ, ಶಶಿಕಲಾ ಮತ್ತು ಇಬ್ಬರನ್ನು ವಿಚಾರಣಾ ನ್ಯಾಯಾಲಯ ದೋಷಿಗಳೆಂದು ಸಾರಿದ್ದರೂ, ಕರ್ನಾಟಕ ಹೈಕೋರ್ಟ್‌ ದೋಷಮುಕ್ತಗೊಳಿಸಿತ್ತು. ಬೆಂಗಳೂರಿನ ವಿಶೇಷ ನ್ಯಾಯಾಲಯದ ತೀರ್ಪನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ.

ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರ ಸೇರಿದಂತೆ ಹಲವರು ಸಲ್ಲಿಸಿದ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ.ಸಿ.ಘೋಷ್‌ ಮತ್ತು ಅಮಿತವ್‌ ರಾಯ್‌ ಅವರು ನಡೆಸಿದ್ದರು

loading...

No comments