Breaking News

ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಹುತಾತ್ಮ, ಓರ್ವ ಉಗ್ರನ ಹತ್ಯೆ.

ಜಮ್ಮು ಕಾಶ್ಮೀರ : ಉತ್ತರ ಕಾಶ್ಮೀರದ ಬಂಡೀಪೊರದಲ್ಲಿ ಸೇನೆ ಮತ್ತು ಉಗ್ರರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರನನ್ನು ಸೇನೆ ಹತ್ಯೆಮಾಡಿದೆ, ಕಾರ್ಯಾಚರಣೆಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ, ಆರು ಯೋಧರು ಗಾಯಗೊಂಡಿದ್ದಾರೆ. ಉಗ್ರರು ಬಂಡೀಪೊರದ ಹಜಿನ್ ಪ್ರದೇಶದ ಪರ್ರೆ ಮೊಹಲ್ಲದಲ್ಲಿ ಅಡಗಿರುವ ಬಗ್ಗೆ ಗುಪ್ತಚರ ಇಲಾಖೆ ನೀಡಿದ ಖಚಿತ ಮಾಹಿತಿ ಆಧರಿಸಿ ಸೇನೆ ಕಾರ್ಯಾಚರಣೆಗೆ ಇಳಿದಿತ್ತು.
ಸೇನೆ ಉಗ್ರರ ಶೋಧ ಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಉಗ್ರರು ಏಕಾಏಕಿ ಸೇನೆಯ ಮೇಲೆ ಧಾಳಿ ಮಾಡಿದ್ದಾರೆ. ಉಗ್ರರ ಧಾಳಿಗೆ ಪ್ರತಿಯಾಗಿ ಧಾಳಿ ನಡೆಸಿದ ಸೇನೆ ಓರ್ವ ಉಗ್ರನನ್ನು ಹತ್ಯೆ ಮಾಡಿದೆ. ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ, ಆರು ಯೋಧರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳದಲ್ಲಿ ಇನ್ನೂ ನಾಲ್ವರು ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಇದ್ದು ಶೋಧ ಕಾರ್ಯ ಮುಂದುವರೆದಿದೆ.

loading...

No comments