Breaking News

ಪಾಕಿಸ್ತಾನ ತನ್ನಲ್ಲಿರುವ ಉಗ್ರ ಕಾರ್ಖಾನೆಗಳನ್ನು ಮುಚ್ಚುವ ಅಗತ್ಯವಿದೆ - ಜೈ ಶಂಕರ್.

ಮುಂಬೈ : ಪಾಕಿಸ್ತಾನ ತನ್ನ ನೆಲದಲ್ಲಿರುವ ಉಗ್ರರನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ತಕ್ಷಣ ಮುಚ್ಚಬೇಕು. ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಜಾಗತಿಕ ಮಟ್ಟದಲ್ಲಿ ಕಳವಳಗಳು ವ್ಯಕ್ತವಾಗುತ್ತಿದೆ ಎಂದು ಮಂಗಳವಾರ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಹೇಳಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ "ಗೇಟ್ ವೇ ಡೈಲಾಗ್" ಕಾರ್ಯಕ್ರಮದಲ್ಲಿ "ರಾಜಕೀಯ ಬದಲಾವಣೆ ಮತ್ತು ಆರ್ಥಿಕ ಅನಿಶ್ಚಿತತೆ" ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಜೈ ಶಂಕರ್ "ಭಾರತ ಇನ್ನೂ ಸಾರ್ಕ್ ಅನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ, ಜೊತೆಗೆ ಅದೇ ರೀತಿಯ ಪ್ರಾದೇಶಿಕ ಏಕತೆ ಮತ್ತು ಸಮಗ್ರತೆಯ ಅವಕಾಶಗಳನ್ನು ಶೋಧಿಸುತ್ತಿದೆ" ಎಂದರು.
ಇದೇ ಸಂದರ್ಭದಲ್ಲಿ ಚೀನಾ ಜೊತೆ ಭಾರತದ ಭಾಂದವ್ಯದ ಬಗ್ಗೆ ಮಾತನಾಡಿದ ಅವರು " ಸಮಸ್ಯೆಗಳಿಗೆ ಹೆದರಿಕೊಂಡು ಸುಮ್ಮನಾಗುವುದರಿಂದ ಯಾವುದೇ ಲಾಭವಾಗುವುದಿಲ್ಲ, ಉಭಯ ರಾಷ್ಟ್ರಗಳ ಭಾಂದವ್ಯ ಉತ್ತಮಗೊಳಿಸಲು ಇನ್ನಷ್ಟು ಶ್ರಮದ ಅಗತ್ಯವಿದೆ" ಎಂದರು.
ಇದೇ ಸಂದರ್ಭದಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುರಿತು ಮಾತನಾಡಿದ ಜೈ ಶಂಕರ್ "ಟ್ರಂಪ್ ಅವರನ್ನು ಪಿಶಾಚೀಕರಿಸಬೇಡಿ, ಟ್ರಂಪ್ ತೀರ್ಮಾನಗಳ ಕುರಿತು ವಿಶ್ಲೇಷಿಸಿ. ಅವರ ತೀರ್ಮಾನಗಳು ಚಿಂತನೆ ನಡೆಸಿ ಕೈಗೊಂಡಿರುವುದೇ ಹೊರತು ಕ್ಷಣಿಕ ತೀರ್ಮಾನವಲ್ಲ. ಪಾಶ್ಚಿಮಾತ್ಯ ದೇಶಗಳು ಪಾಕಿಸ್ತಾನ ಹಾಗೂ ಉಗ್ರವಾದಗಳ ಬಗ್ಗೆ ಮಾತನಾಡುವುದಿಲ್ಲವಾದರೂ ಅವರಿಗೂ ಕಳವಳ ಇದೆ" ಎಂದರು.
loading...

No comments