ಖಾದರ್ ಚಪ್ಪಲಿ ಹೇಳಿಕೆ ಖಂಡಿಸಿದ ಜನಾರ್ಧನ ಪೂಜಾರಿ
ಅವರು ಸಂವಿಧಾನ ಓದಿಲ್ಲ, ಪಾಸಾಗಿದ್ದಾರೋ ಇಲ್ಲವೋ ಗೊತ್ತಿಲ್ಲ
ಮಂಗಳೂರು : ಕೇಂದ್ರ ಮಾಜಿ ಸಚಿವ ಜನಾರ್ಧನ ಪೂಜಾರಿ ಇಂದು ಮಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆಹಾರ ಸಚಿವ ಯುಟಿ ಖಾದರ್ ಅವರನ್ನು ತರಾಟೆಗೆ ತೆಗೆದು ಕೊಂಡರು .
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಆಗಮನ ವಿರೋಧಿಸಿ ಬಂದ್ ಗೆ ಕರೆ ನೀಡಿರುವ ಸಂಘಪರಿವಾರದ ವಿರುದ್ದ ಸಚಿವ ಯು.ಟಿ.ಖಾದರ್ ಕಿಡಿಕಾರಿ ಬಂದ್ ಗೆ ಕರೆಕೊಟ್ಟಿರುವವರಿಗೆ ಚಪ್ಪಲಿ ಏಟು ನೀಡಬೇಕು ಎಂದು ಹೇಳಿದ್ದರು ಈ ಬಗ್ಗೆ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಪೂಜಾರಿ ಸಚಿವ ಯುಟಿ ಖಾದರ್ ಹೇಳಿಕೆ ಮೂರ್ಖತನದಿಂದ ಕೂಡಿದ್ದು .ಅವರು ಸಂವಿಧಾನ ಓದಿಲ್ಲ, ಪಾಸಾಗಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ವ್ಯಂಗ್ಯ ವಾಡಿದರು .
ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ ,ಪ್ರತಿಭಟನೆ ಮಾಡುವವರಿಗೆ ಚಪ್ಪಲಿಯಲ್ಲಿ ಹೊಡೆಯ ಬೇಕು ಎಂದು ಹೇಳುವುದು ಸರಿ ಅಲ್ಲ ಮತ್ತು ನಾನು ಹಲವಾರು ಬಾರಿ ಯುಟಿ ಖಾದರ್ ಅವರಿಗೆ ಯಾವುದೇ ಹೇಳಿಕೆ ನೀಡುವ ಮೊದಲು ಅದನ್ನು ವಿಮರ್ಶಿಸಿ ಎಚ್ಚರಿಕೆಯಿಂದ ನೀಡಬೇಕೆಂದು ಹೇಳಿದ್ದೆ ಎಂದು ಹೇಳಿದರು .
loading...
No comments