ವಿದ್ಯಾರ್ಥಿನಿಯರಿಗೆ `ಸೆಕ್ಸ್ ಆಟಿಕೆ ಬಳಸಿ’ ಎಂದ ಪ್ರಿನ್ಸಿ
ಬೆಂಗಳೂರು : “ನಟಿ ಸನ್ನಿ ಲಿಯೋನ್ ನಿಮ್ಮ ರೋಲ್ ಮಾಡೆಲ್ ಆಗಬೇಕು, ಬಾಯ್ ಫ್ರೆಂಡ್ ಹೊಂದಿ, ಸೆಕ್ಸ್ ಆಟಿಕೆಗಳನ್ನು ಉಪಯೋಗಿಸಿ, ನನ್ನನ್ನು ಭೇಟಿಯಾಗಿ. ನಿಮಗೆ ಎಲ್ಲಾ ರೀತಿಯ ನೈತಿಕ, ಆರ್ಥಿಕ ಬೆಂಬಲ ನೀಡುತ್ತೇನೆ. ನಾನು ಹೇಳಿದ ಹಾಗೆ ನಡೆದುಕೊಳ್ಳದೇ ಹೋದರೆ ನೀವು ಫಸ್ಟ್ ಕ್ಲಾಸ್ ಅಂಕಗಳನ್ನು ಪಡೆಯುವ ಅವಕಾಶ ಕಳೆದುಕೊಳ್ಳುತ್ತೀರಿ” -ವಿದ್ಯಾರ್ಥಿನಿಯರ ಮೇಲೆ ಲೈಂಗಿನ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಇಲ್ಲಿನ ಸದಾಶಿವನಗರದ ಕೇಂದ್ರೀಯ ವಿದ್ಯಾಲಯದ ಪ್ರಿನ್ಸಿಪಾಲ್ ಕುಮಾರ್ ಠಾಖುರ್ 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ತನ್ನ ಚೇಂಬರಿಗೆ ಕರೆದು ಮೇಲಿನಂತೆ ಹೇಳಿದ್ದನು.
ಘಟನೆ ಜನವರಿ 26ರಂದು ಸಂಜೆ 7.20 ಹಾಗೂ 8.10ರ ನಡುವೆ ನಡೆದಿದ್ದರೆ, ವಿದ್ಯಾರ್ಥಿನಿ ಜನವರಿ 30ರಂದು ದೂರು ನೀಡಿದ್ದಳು.
ಶುಕ್ರವಾರ ತಜ್ಞರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಿದರು.
ಆರೋಪಿ ಪ್ರಿನ್ಸಿಪಾಲ್ ಹಲವಾರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆನ್ನಲಾಗಿದ್ದು ಆತನ ಮೇಲೆ ಪೋಕ್ಸೋ ಕಾಯಿದೆಯನ್ವಯ ಪ್ರಕರಣ ದಾಖಲಾಗಿದೆ. ಆತನಿಗೆ ಜಾಮೀನು ನೀಡಿರುವುದರ ವಿರುದ್ಧ ಹಲವು ವಿದ್ಯಾರ್ಥಿಗಳ ಹೆತ್ತವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
loading...
No comments