Breaking News

10 ರೂ ನಾಣ್ಯ ತೆಗೆದು ಕೊಳ್ಳಲು ನಿರಾಕರಿಸುವ ಗ್ರಾಹಕರು ಮತ್ತು ವರ್ತಕರು ?


ಒಂದು ಸಾವಿರ ಹಾಗೂ  500 ಮುಖಬೆಲೆಯ ನೋಟ್ ಬ್ಯಾನ್ ಆದ ಹಿನ್ನೆಲೆಯಲ್ಲೇ, 10 ರೂಪಾಯಿ ನಾಣ್ಯ ಕೂಡ ಬ್ಯಾನ್ ಆಗಿದೆ ಎಂಬ ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ  ದೇಶದ ನಾನಾಕಡೆ 10 ರೂಪಾಯಿ ನಾಣ್ಯ ತೆಗೆದುಕೊಳ್ಳಲು ಗ್ರಾಹಕರು ಮತ್ತು ವರ್ತಕರು ನಿರಾಕರಿಸುತ್ತಿದ್ದಾರೆ .
10 ರೂಪಾಯಿ ನಕಲಿ ನಾಣ್ಯ ಚಲಾವಣೆಯಾಗುತ್ತಿದೆ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿರುವ ರಿಸರ್ವ್ ಬ್ಯಾಂಕ್, ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ತಿಳಿಸಿದೆ. ಅಲ್ಲದೇ ಯಾವುದೇ ಹಿಂಜರಿಕೆಯಿಲ್ಲದೆ 10 ರೂಪಾಯಿ ನಾಣ್ಯವನ್ನು ವಹಿವಾಟುಗಳಿಗೆ ಸಾರ್ವಜನಿಕರು ಬಳಸಿಕೊಳ್ಳಬಹುದು ಎಂದು ಸ್ಪಷ್ಟನೆ ಕೂಡ ನೀಡಿದೆ .ಈ ಎಲ್ಲಾ ಬೆಳವಣಿಗೆಯಲ್ಲಿ ಈಗ ಕೂಡ ಹೆಚ್ಚಿನ ಕಡೆಯಲ್ಲಿ 10 ರೂ ನಾಣ್ಯವನ್ನು ತೆಗೆದು ಕೊಳ್ಳಲು ನಿರಾಕರಿಸುವುದು ಮುಂದುವರೆದಿದೆ .


loading...

No comments