ನಟ ದರ್ಶನ್ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಉಡುಗೊರೆ.
ಮೈಸೂರು : ನಟ ದರ್ಶನ್ 40ನೇ ಹುಟ್ಟುಹಬ್ಬಕ್ಕೆ ನಿರ್ಮಾಪಕ ಸಂದೇಶ್ ನಾಗರಾಜ್ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.ಮೈಸೂರಿನಲ್ಲಿ ನಟ ದರ್ಶನ್ ಅವರಿಗೆ ಸಂದೇಶ್ ನಾಗರಾಜ್, ಫಾರ್ಚೋ ಕಾರು ಗಿಫ್ಟ್ ನೀಡಿದ್ದಾರೆ.
ಈ ಕಾರಿನ ಬೆಲೆ ಒಂದು ಕೋಟಿ 20 ಲಕ್ಷ ಮೌಲ್ಯವುಳ್ಳದ್ದು ಎಂದು ಹೇಳಲಾಗುತ್ತಿದೆ. ನಟ ದರ್ಶನ್ ಅವರ ಮುಂದಿನ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಮುಹೂರ್ತಕ್ಕೂ ಮುನ್ನ ಸಂದೇಶ್ ನಾಗರಾಜ್ ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ.ಇದೇ ತಿಂಗಳ 16 ರಂದು ದರ್ಶನ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
ಸ್ಟಾರ್ ನಟರು ಚಿತ್ರಗಳಿಗೆ ದುಬಾರಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಪಡೆದ ಸಂಭಾವನೆಯಲ್ಲಿ ಕೆಲ ಮೊತ್ತಕ್ಕೆ ಲೆಕ್ಕ ತೋರಿಸಿ ಉಳಿದ ಮೊತ್ತವನ್ನು ಬ್ಲಾಕ್‌ನಲ್ಲಿ ಪಡೆಯುತ್ತಿದ್ದರು. ದೇಶದಲ್ಲಿ ನೋಟು ಅಮಾನ್ಯದ ಬಳಿಕ ಸ್ಟಾರ್ ನಟರು ಪಡೆಯುವ ಸಂಭಾವನೆಯನ್ನು ಕಪ್ಪು ಹಣದ ಬದಲಿಗೆ ಎಲ್ಲವೂ ವೈಟಾಗಿಯೇ ಪಡೆಯಬೇಕಾಗಿದೆ.
loading...
No comments