Breaking News

ದಕ್ಷಿಣಕನ್ನಡ ಪೋಲೀಸರ ಯಶಸ್ವೀ ಕಾರ್ಯಾಚರಣೆ. 14 ಬಾಂಗ್ಲಾದೇಶೀ ನುಸುಳುಕೋರರ ಬಂಧನ.

ಬೆಳ್ತಂಗಡಿ : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ 14ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಬಾಂಗ್ಲಾ ದೇಶದಿಂದ ಯಾವುದೇ ರಹದಾರಿ ಹೊಂದದೆ, ಯಾವುದೋ ರೀತಿಯಲ್ಲಿ ನುಸುಳಿ ಅನಧಿಕೃತವಾಗಿ ಭಾರತಕ್ಕೆ ಬಂದು ಬೆಳ್ತಂಗಡಿ ತಾಲೂಕಿನ ಕಾಶೀಪಟ್ನ ಗ್ರಾಮದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆಂಬ  ಖಚಿತ ಮಾಹಿತಿ ಮೇರೆಗೆ  ಬಂಟ್ವಾಳ ಡಿವೈ ಎಸ್ ರವೀಶ್ ರವರ ನೇತೃತ್ವದಲ್ಲಿ, ಸಿಪಿಐ ಬೆಳ್ತಂಗಡಿ ,ವೇಣೂರು ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ ಎಸ್. ಶೀನಪ್ಪ ಗೌಡ ರವರು, ಸಿಬ್ಬಂದಿಗಳಾದ  ಎಎಸ್‌ಐ ಓಡಿಯಪ್ಪ ಗೌಡ, ಹೆಡ್ ಕಾನ್ಸ್ಟೆಬಲ್'ಗಳಾದ ಅಶೋಕ ಸಪಲ್ಯ, ಶಿವರಾಮ, ಹರೀಶ್ ನಾಯ್ಕ್, ರೋಹಿನಾಥ್ ರವರೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಅಕ್ರಮವಾಗಿ ವಲಸೆ ಬಂದು ಕೆಲಸ ಮಾಡಿಕೊಂಡಿದ್ದ 14 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಗಳೆಲ್ಲರೂ ಬಾಂಗ್ಲಾ ದೇಶದ ಡಾಕಾದ ರಾಜಸೈ ಎಂಬಲ್ಲಿಯವರಾಗಿದ್ದು . ಮಹಮ್ಮದ್ ಜಹಾಂಗೀರ್ (26), ಅಬ್ದುಲ್ ಹಾಕಿಂ (25), ಮಹಮ್ಮದ್ ಆಲಂಗೀರ್ (27), ಅಬ್ದುಲ್ ಹಾಲಿಂ (19), ಎಮ್‌.ಡಿ ಮಹಮ್ಮದ್ ಅಜೀಜಲ್ಲ್ (19), ಎಮ್‌ ಡಿ ಬಾಬು (20),ಜೋಹರುಲ್ಲ್ ಇಸ್ಲಾಂ (24), ಮಹಮ್ಮದ್ ಸೊಹಿದುಲ್ ಇಸ್ಲಾಂ (30) ಮಹಮ್ಮದ್ ಇಕ್ಬಾಲ್ ಆಲಿ(19), ಮಹಮ್ಮದ್ ಸೋಹೆಲ್ ರಾಣಾ (19), ಜೋಹರುಲ್ಲಾ ಇಸ್ಲಾಂ (35), ಮಹಮ್ಮದ್ ಸುಮನ್ ಆಲಿ (24), ಮಹಮ್ಮದ್ ಮೋಮಿನ್ (20), ಮಹಮ್ಮದ್ ಪುಲ್ಲಾಲ್ (19), ಹಾಗೂ ಇವರಿಗೆ ಆಶ್ರಯ ನೀಡಿ ಕೆಲಸ ಮಾಡಿಸುತ್ತಿದ್ದ   ಸ್ಥಳೀಯ ನಿವಾಸಿ ನಿಸಾರ್ ಅಹಮ್ಮದ್ ಮೂಡಬಿದ್ರೆ ಎಂಬಾತನನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವರ ಮೇಲೆ ಕಲಂ: 370 (ಎ) (2) ಭಾ.ದಂ.ಸಂ ಮತ್ತು ಕಲಂ: 14 ವಿದೇಶಿಯರ ಅಧಿನಿಯಮ 1946 ರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಜಿಲ್ಲೆಯಲ್ಲಿ ಇಂತಹ ಅಕ್ರಮ ವಲಸಿಗರ ಪತ್ತೆಗಾಗಿ ಒಂದು ವಿಶೇಷ ತಂಡವನ್ನು ರಚಿಸಿ ಮುಂಬರುವ ದಿನಗಳಲ್ಲಿ ವಿದೇಶಿ ಅಕ್ರಮ ವಲಸಿಗರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಜೊತೆಗೆ ಅಂತಹ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದವರ ವಿರುದ್ದವೂ ಕಾನೂನು ಕ್ರಮ ಜರುಗಿಸುವುದಾಗಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀ ಭೂಷಣ್‌. ಜಿ. ಬೊರಸೆ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
loading...

No comments