Breaking News

ಎಲ್ಲವನ್ನು ಧರ್ಮಸ್ಥಳ ಮಂಜುನಾಥ ನೋಡಿಕೊಳ್ಳುತಾನೆ ; ಐವನ್ ಡಿಸೋಜಾ


ಬೆಳ್ತಂಗಡಿ ;  ಬುಧವಾರ ಫೆಬ್ರವರಿ 22 ರಂದು ಎಂಎಲ್ಸಿ ಐವನ್ ಡಿ'ಸೋಜಾ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು ನಂತರ ಮಾಧ್ಯಮ ಪ್ರತಿನಿಧಿಗಳು ಕೇಳಿದ  ಪ್ರಶ್ನೆಗೆ ಉತ್ತರಿಸಿದ ಐವನ್ ಡಿಸೋಜಾ  ಮಂಜುನಾಥ ಸ್ವಾಮಿ ಕ್ಷೇತ್ರಕ್ಕೆ ಭೇಟಿ ವ್ಯಯುಕ್ತಿಕವಾದದ್ದು ,ರಾಜಕೀಯ ಪ್ರೇರಿತ ಭೇಟಿ ಅಲ್ಲ ಎಂದರು

ಪೂಜಾರಿ ಆಪಾದನೆಗಳ  ಬಗ್ಗೆ ವರದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ ಐವನ್ "ಈ ಭೇಟಿ ವೈಯಕ್ತಿಕ . ಮಂಜುನಾಥ ಸ್ವಾಮಿ ಎಲ್ಲವನ್ನು ನೋಡಿಕೊಳ್ಳುತಾನೆ .ಎಲ್ಲಾ ಆರೋಪಗಳನ್ನು ಮಂಜುನಾಥನಲ್ಲಿ ಹೇಳಿಕೊಂಡಿದ್ದೇನೆ ಎಂದರು .


ಇತ್ತೀಚಿಗೆ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಐವನ್ ಡಿಸೋಜಾ ಅವರ ವಿರುದ್ಧ ಕಿಡಿ ಕಾರಿದ್ದರು
ರಾಜಕೀಯ ಕುತಂತ್ರವನ್ನು ನಡೆಸುತ್ತಿರುವ ರಾಜ್ಯ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ತಮ್ಮ ರಾಜಕೀಯ ಬದುಕಿನಲ್ಲಿ ತಪ್ಪು ಹಾದಿಯಲ್ಲಿ ಹೋಗುತ್ತಿದ್ದಾರೆ. ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಬರುತ್ತಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಹಾದಿ ತಪ್ಪಿಸಿ ಬಾರದಂತೆ ಮಾಡಿದ್ದಾರೆ.“ಐವನ್ನರಿಗೆ ತನ್ನ ರಾಜಕೀಯ ಬದುಕಿನಲ್ಲಿ ಎಂದಿಗೂ ಒಳಿತಾಗಲ್ಲ. ನೀವು ಮಾಡಿದ ಅನ್ಯಾಯವನ್ನು ದೇವರು ಎಂದಿಗೂ ಕ್ಷಮಿಸಲ್ಲ. ಕುದ್ರೋಳಿ ಗೋಕರ್ಣನಾಥ, ಮಸೀದಿಯಲ್ಲಿರುವ ಅಲ್ಲಾ, ನೀವು ನಂಬಿದ ಏಸು ಕ್ರಿಸ್ತನೂ ನಿಮಗೆ ಒಳಿತು ಮಾಡಲ್ಲ. ದೇವಸ್ಥಾನಕ್ಕೆ ಬರುವವರನ್ನು ಪಿತೂರಿಯಿಂದ ಕರೆದುಕೊಂಡು ಹೋಗಿ ನೀವು ಸಾಧಿಸಬೇಕಾದ ಕೆಲಸವೂ ಎಂದೂ ಪೂರ್ಣವಾಗದು” ಎಂದು ಜನಾರ್ದನ ಪೂಜಾರಿ ಬಹಿರಂಗವಾಗಿ ಆರೋಪಿಸಿದ್ದರು ,
loading...

No comments